Widgets Magazine

ಅನಿಲ್ ಕುಂಬ್ಳೆ ಪ್ರಕಾರ ಆರ್ ಸಿಬಿ ಸೋಲಿಗೆ ಇದುವೇ ಕಾರಣ!

ಬೆಂಗಳೂರು| Krishnaveni K| Last Modified ಶುಕ್ರವಾರ, 10 ಮೇ 2019 (07:10 IST)
ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರಾಶಾದಾಯಕ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಕಾರಣವೊಂದನ್ನು ನೀಡಿದ್ದಾರೆ.

 
ಒಂದು ಕಾಲದಲ್ಲಿ ಆರ್ ಸಿಬಿ ನಾಯಕರಾಗಿದ್ದ ಕುಂಬ್ಳೆ ತಂಡದ ಸೋಲಿಗೆ ನಿಜವಾದ ಕಾರಣ ಟೀಂ ಮ್ಯಾನೇಜ್ ಮೆಂಟ್ ಆಯ್ಕೆ ವಿಚಾರದಲ್ಲಿ ಎಡವಿದ್ದೇ ಕಾರಣ ಎಂದಿದ್ದಾರೆ.
 
‘ಆರ್ ಸಿಬಿ ತಂಡದ ಆಯ್ಕೆ ಸರಿಯಾಗಿರಲಿಲ್ಲ. ಅವರು ಮೂರು ವಿದೇಶೀ ಆಟಗಾರರನ್ನು ಆಯ್ಕೆ ಮಾಡಿದರು. ಬ್ಯಾಟಿಂಗ್ ಕೇವಲ ಎಬಿಡಿ ಮತ್ತು ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಇವರಿಬ್ಬರೂ ಫೇಲ್ ಆದರೆ ತಂಡದ ಬ್ಯಾಟಿಂಗ್ ನೆಲಕಚ್ಚುತ್ತಿತ್ತು. ಇನ್ನು ಬೌಲಿಂಗ್ ದೊಡ್ಡ ಚಿಂತೆಯ ವಿಷಯ. ಇಡೀ ತಂಡ ಹಿರಿಯ ವೇಗಿ ಉಮೇಶ್ ಯಾದವ್ ರನ್ನೇ ನೆಚ್ಚಿಕೊಂಡಿತ್ತು. ಆದರೆ ಅವರು ಸ್ಥಿರ ಪ್ರದರ್ಶನ ನೀಡದೇ ಇದ್ದಿದ್ದೇ ಸೋಲಿಗೆ ಕಾರಣವಾಯಿತು’ ಎಂದು ಕುಂಬ್ಳೆ ವಿಶ್ಲೇಷಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :