ಬೆಂಗಳೂರು: ನಾಲ್ಕು ಸೋಲಿನ ಬಳಿಕ ಈಗ ಆರ್ ಸಿಬಿ ಪಾಳಯದಲ್ಲಿ ನಿಜಕ್ಕೂ ಸಂಚಲನ ಮೂಡುತ್ತಿದೆ. ಈಗ ತಮ್ಮ ತಂಡದ ಸಮತೋಲನದ ಬಗ್ಗೆ ಟೀಂ ಮ್ಯಾನೇಜ್ ಮೆಂಟ್ ನಿಜಕ್ಕೂ ತಲೆಕೆಡಿಸಿಕೊಂಡಿದೆ.ಇದುವರೆಗೆ ಆಡಿದ ಒಂದೇ ಪಂದ್ಯದಲ್ಲೂ ಗೆಲ್ಲದ ಆರ್ ಸಿಬಿ ಮೇಲೆ ಈಗ ಟೀಕೆಗಳು ಮಿತಿಮೀರಿವೆ. ಇದರ ಬೆನ್ನಲ್ಲೇ ಇದೀಗ ಬೌಲಿಂಗ್ ಕೋಚ್ ಆಶಿಷ್ ನೆಹ್ರಾ ನಮಗೆ ಈಗ ಸಮಯವಿಲ್ಲ. ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.ನಮಗೆ ಈಗ ಸಮಯದ ಅಭಾವವಿದೆ.