Widgets Magazine

ಐಪಿಎಲ್ ಫೈನಲ್ ನಲ್ಲೂ ನಿಲ್ಲದ ವಿವಾದ

ಹೈದರಾಬಾದ್| Krishnaveni K| Last Modified ಸೋಮವಾರ, 13 ಮೇ 2019 (07:19 IST)
ಹೈದರಾಬಾದ್: ಈ ಬಾರಿ ಐಪಿಎಲ್ ನಲ್ಲಿ ಮೊದಲ ಪಂದ್ಯದಲ್ಲೇ ನೋ ಬಾಲ್ ವಿವಾದವಾಗಿತ್ತು. ಇದೀಗ ಕೊನೆಯ ಪಂದ್ಯದಲ್ಲೂ ವಿವಾದವಾಗಿದೆ.

 
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ರನ್ನು ಔಟ್ ಮಾಡಿದ ಸಿಎಸ್ ಕೆ ಬೌಲರ್ ಶ್ರಾದ್ಧೂಲ್ ಠಾಕೂರ್ ಬೆರಳು ತೋರಿಸಿ ಸೆಂಡ್ ಆಫ್ ಮಾಡಿದ್ದು, ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ರೋಹಿತ್ ಶರ್ಮಾಗೆ ಅಸಮಾಧಾನ ಉಂಟುಮಾಡಿದೆ.
 
ತಕ್ಷಣವೇ ಅಂಪಾಯರ್ ಬಳಿ ತೆರೆಳಿದ ರೋಹಿತ್ ಶರ್ಮಾ ಶ್ರಾದ್ಧೂಲ್ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಶ್ರಾದ್ಧೂಲ್ ಬಳಿ ಅಂಪಾಯರ್ ಮಾತುಕತೆ ನಡೆಸಿದ ಬಳಿಕ ಎಲ್ಲವೂ ಶಾಂತವಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :