Widgets Magazine

ಗೆಲ್ಲುವ ಕುದುರೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮತ್ತೊಂದು ಆಘಾತ

ಚೆನ್ನೈ| Krishnaveni K| Last Modified ಭಾನುವಾರ, 31 ಮಾರ್ಚ್ 2019 (09:12 IST)
ಚೆನ್ನೈ: ಈ ಬಾರಿಯೂ ಐಪಿಎಲ್ ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಡೇವಿಡ್ ವಿಲ್ಲೆ ರೂಪದಲ್ಲಿ ಆಘಾತ ಸಿಕ್ಕಿದೆ.

 
ಕಳೆದ ಆವೃತ್ತಿಯಲ್ಲಿ ಸಿಎಸ್ ಕೆ ಕೂಡಿಕೊಂಡಿದ್ದ ಡೇವಿಡ್ ವಿಲ್ಲೆ ಇದೀಗ ಕೌಟುಂಬಿಕ ಕಾರಣಗಳಿಗಾಗಿ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಡೇವಿಡ್ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ಸಮಯದಲ್ಲಿ ಪತ್ನಿಯ ಜತೆಗಿರಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಡೇವಿಡ್ ಹೇಳಿಕೊಂಡಿದ್ದಾರೆ.
 
ಇದಕ್ಕೂ ಮೊದಲು ದ.ಆಫ್ರಿಕಾ ಮೂಲದ ವೇಗಿ ಲುಂಗಿ ನಿಗಿಡಿ ಗಾಯಗೊಂಡು ಚೆನ್ನೈಗೆ ಐಪಿಎಲ್ ಆರಂಭದಲ್ಲಿಯೇ ಆಘಾತ ನೀಡಿದ್ದರು. ಇದೀಗ ಮತ್ತೊಬ್ಬ ಆಟಗಾರ ಹೊರಬಿದ್ದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :