ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಈ ಕೂಟದ ಐದನೇ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.ಸಿಎಸ್ ಕೆ ನಾಯಕ ಧೋನಿ ಐಪಿಎಲ್ ನಲ್ಲಿ ಈ ಪಂದ್ಯದ ಮೂಲಕ ನಾಯಕನಾಗಿ 100 ನೇ ಗೆಲುವು ಸಾಧಿಸಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ 100 ಗೆಲುವು ದಾಖಲಿಸಿದ ಮೊದಲ ನಾಯಕ ಎಂಬ ದಾಖಲೆ ಮಾಡಿದರು.ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ನಲ್ಲೂ ಮಿಂಚಿದ್ದರು.