Widgets Magazine

ಅಸಮಾನ್ಯ ಸಿಕ್ಸರ್ ಬಾರಿಸಿದ ರವೀಂದ್ರ ಜಡೇಜಾ ತಲೆಗೆ ಹೊಡೆದ ಧೋನಿ!

ಜೈಪುರ| Krishnaveni K| Last Modified ಶನಿವಾರ, 13 ಏಪ್ರಿಲ್ 2019 (08:57 IST)
ಜೈಪುರ: ಧೋನಿ ತಮ್ಮ ಸಹ ಆಟಗಾರರನ್ನು ಯಾವತ್ತೂ ಪ್ರೋತ್ಸಾಹಿಸುತ್ತಾರೆ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಸಮಾನ್ಯ ಸಿಕ್ಸರ್ ಒಂದನ್ನು ಸಿಡಿಸಿದ ರವೀಂದ್ರ ಜಡೇಜಾ ತಲೆಗೆ ಬ್ಯಾಟ್ ನಿಂದ ಹೊಡೆಯುವ ಫೋಟೋಗಳು ಇದೀಗ ವೈರಲ್ ಆಗಿದೆ.
 
ಅಷ್ಟಕ್ಕೂ ಇದು ಅಭಿಮಾನಿಗಳ ಕಲ್ಪನೆಯಷ್ಟೇ. ಅಸಲಿಗೆ ಧೋನಿ ಜಡೇಜಾ ತಲೆಗೆ ಹೊಡೆದಿರಲಿಲ್ಲ. ಅಸಂಪ್ರದಾಯಿಕ ಹೊಡೆತಕ್ಕೆ ಕೈ ಹಾಕಿ ಯಶಸ್ವಿಯಾದರೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದೇ ಜಡೇಜಾ ಕೆಳಕ್ಕೆ ಬಿದ್ದರು.
 
ಆಗ ಇನ್ನೊಂದು ತುದಿಯಲ್ಲಿ ಬ್ಯಾಟ್ಸ್ ಮನ್ ಆಗಿದ್ದ ಧೋನಿ ಜಡೇಜಾ ಪಕ್ಕಕ್ಕೆ ಬಂದು ಬಗ್ಗಿ ನೋಡುವ ಫೋಟೋ ಅವರ ತಲೆಗೆ ಹೊಡೆಯುವಂತೆ ಕಾಣುತ್ತಿದೆ. ಇದೇ ಫೋಟೋ ಇಟ್ಟುಕೊಂಡು ಅಭಿಮಾನಿಗಳು ಟ್ವಿಟರ್ ನಲ್ಲಿ ತಮಾಷೆಯಾಗಿ ಧೋನಿ ಜಡೇಜಾ ತಲೆಗೆ ಹೊಡೆದರು ಎಂದು ಕಾಲೆಳೆಯುತ್ತಿದ್ದಾರಷ್ಟೇ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :