ಧೋನಿ ಕೈಯಲ್ಲಿ ಮೈದಾನದಲ್ಲೇ ಬೈಸಿಕೊಂಡ ಸಿಎಸ್ ಕೆ ಬೌಲರ್ ದೀಪಕ್ ಚಹರ್

ಚೆನ್ನೈ, ಸೋಮವಾರ, 8 ಏಪ್ರಿಲ್ 2019 (09:19 IST)

ಚೆನ್ನೈ: ಸಾಮಾನ್ಯವಾಗಿ ಧೋನಿ ಅಷ್ಟು ಬೇಗ ಮೈದಾನದಲ್ಲಿ ತಮ್ಮ ಭಾವನೆಗಳನ್ನು ತೋರ್ಪಡಿಸುವುದಿಲ್ಲ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಟ್ಟುಗೊಂಡಿದ್ದು ನೋಡಿ ಅಂಪಾಯರ್ ಕೂಡಾ ಅವಾಕ್ಕಾದ ಘಟನೆ ನಡೆದಿದೆ.


 
ಪಂಜಾಬ್ ಗೆಲುವಿಗೆ 12 ಬಾಲ್ ಗಳಲ್ಲಿ 32 ರನ್ ಬೇಕಾಗಿದ್ದಾಗ ದಾಳಿಗಿಳಿದ ದೀಪಕ್ ಚಹರ್ ಮೊದಲ ಎಸೆತವನ್ನು ನೋ ಬಾಲ್ ಎಸೆದರು. ಇದನ್ನು ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಬೌಂಡರಿ ಬಾರಿಸಿದರು. ಮುಂದಿನ ಎಸೆತವನ್ನೂ ದೀಪಕ್ ನೋ ಬಾಲ್ ಎಸೆದರು. ಅದರಲ್ಲಿ ಎರಡು ರನ್ ಹರಿದುಬಂತು.
 
ಆದರೆ ಇಷ್ಟರಲ್ಲೇ ಧೋನಿ ಸಹನೆ ಕಟ್ಟೆಯೊಡೆದಿತ್ತು. ಸುರೇಶ್ ರೈನಾ ಜತೆಗೆ ನೇರವಾಗಿ ಬೌಲರ್ ಬಳಿಗೆ ಬಂದ ಧೋನಿ ಸರಿಯಾಗಿ ಬೈದು ಬುದ್ಧಿ ಹೇಳಿದರು. ಧೋನಿ ಕೋಪಗೊಂಡು ಬಂದಿದ್ದನ್ನು ನೋಡಿ ಅಂಪಾಯರ್ ಕೂಡಾ ಅವಾಕ್ಕಾಗಿ ನೋಡುತ್ತಾ ನಿಂತರು. ಆದರೆ ಧೋನಿ ಕೈಯಲ್ಲಿ ಬೈಸಿಕೊಂಡ ಮೇಲೆ ಬುದ್ಧಿ ಕಲಿತುಕೊಂಡ ದೀಪಕ್ ಮುಂದಿನ ಎಸೆತಗಳನ್ನು ಸರಿಯಾಗಿಯೇ ಹಾಕಿದರು!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಮೇಲೆ ಮತ್ತೆ ಟೀಕಾ ಪ್ರಹಾರ ಮಾಡಿದ ಗೌತಮ್ ಗಂಭೀರ್

ನವದೆಹಲಿ: ಇತ್ತೀಚೆಗಷ್ಟೇ ಒಂದೂ ಐಪಿಎಲ್ ಟ್ರೋಫಿ ಗೆಲ್ಲದ ವಿರಾಟ್ ಕೊಹ್ಲಿ ನಾಲಾಯಕ್ ನಾಯಕ ಎಂದು ವ್ಯಂಗ್ಯ ...

news

ಮಹತ್ವದ ಪಂದ್ಯಕ್ಕೆ ಮೊದಲು ಪತ್ನಿ ಅನುಷ್ಕಾ ಜತೆ ಸುತ್ತಾಡುತ್ತಿದ್ದ ವಿರಾಟ್ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಆವೃತ್ತಿಯಲ್ಲಿ ಮೊದಲ ಗೆಲುವಿಗೆ ಪರದಾಡುತ್ತಿದ್ದರೆ, ...

news

ಐಪಿಎಲ್: ಪಂದ್ಯದ ಬಳಿಕ ಸ್ಟೇಡಿಯಂ ಕ್ಲೀನ್ ಮಾಡಿದ ಚೆನ್ನೈ ಅಭಿಮಾನಿಗಳಿಗೆ ಸಿಕ್ಕಿದ್ದೇನು ಗೊತ್ತಾ?!

ಚೆನ್ನೈ: ಕ್ಲೀನ್ ಇಂಡಿಯಾ ಎಂಬ ಘೋಷ ವಾಕ್ಯಗಳು ಕೇವಲ ಮಾತುಗಳಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ಯೋಜನೆ ...

news

ಐಪಿಎಲ್: ಟ್ರೋಲ್ ಮಾಡಿಯೇ ಸುಸ್ತಾದ ಆರ್ ಸಿಬಿ ಟ್ರೋಲಿಗರು!

ಬೆಂಗಳೂರು: ಏನೇನು ಮಾಡಿದರೂ, ತಮಾಷೆ ಮಾಡಿದರೂ, ಹೀಯಾಳಿಸಿದರೂ ಆರ್ ಸಿಬಿ ಆಟಗಾರರು ಬುದ್ಧಿ ಕಲಿಯುವ ಲಕ್ಷಣ ...