ಮೊಹಾಲಿ: ಗೆಲುವಿನ ಕುದುರೆ ಚೆನ್ನೈ ಸೂಪರ್ ಕಿಂಗ್ಸ್ ನಾಗಲೋಟಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಕಡಿವಾಣ ಹಾಕಿದೆ.ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಸಾಮಾನ್ಯವಾಗಿ ಚಾಣಕ್ಷ್ಯ ನಾಯಕ ಧೋನಿಗೆ ಎದುರಾಳಿಗಳನ್ನು ಇಷ್ಟು ರನ್ ಸಾಕು.ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 36 ಎಸೆತಗಳಲ್ಲಿ 71 ರನ್ ಗಳಿಸಿ ಎದುರಾಳಿಗಳಿಂದ ಜಯ ಕಸಿದುಕೊಂಡರು.