Widgets Magazine

ಧೋನಿ ಲಕ್ಕಿ ಎಂದು ಮತ್ತೆ ಸಾಬೀತಾಯ್ತು! ಬಾಲ್ ತಗುಲಿದರೂ ಬೇಲ್ಸ್ ಬೀಳಲಿಲ್ಲ!

ಚೆನ್ನೈ| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (10:34 IST)
ಚೆನ್ನೈ: ಧೋನಿ ಲಕ್ಕಿ ಆಟಗಾರ ಎಂಬುದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

 
ಯಾಕೆಂದರೆ ಚೆನ್ನೈ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಧೋನಿ ತಂಡಕ್ಕೆ ಬ್ಯಾಟಿಂಗ್ ಮೂಲಕ ಉಪಯುಕ್ತ ಇನಿಂಗ್ಸ್ ಆಡಿದರು. ಒಂದು ವೇಳೆ ಧೋನಿ ಬೇಗನೇ ಔಟಾಗಿದ್ದರೆ ತಂಡದ ಸ್ಥಿತಿ ಹೀನಾಯವಾಗುತ್ತಿತ್ತು.
 
ಧೋನಿ ಶೂನ್ಯ ಗಳಿಸಿದ್ದಾಗ ಆರ್ಚರ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಬೇಕಿತ್ತು. ಆದರೆ ಬಾಲ್ ವಿಕೆಟ್ ಗೆ ತಗುಲಿದರೂ ಬೇಲ್ಸ್ ಬಿದ್ದಿರಲಿಲ್ಲ. ಹಾಗಾಗಿ ಧೋನಿ ಅದೃಷ್ಟವಶಾತ್ ಪಾರಾದರು. ಆಗ ಚೆನ್ನೈ 28 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಒಂದು ವೇಳೆ ಧೋನಿ ಆಗ ಔಟಾಗಿದ್ದರೆ ಚೆನ್ನೈ ಹೀನಾಯ ಸ್ಥಿತಿಗೆ ತಲುಪುತ್ತಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :