Widgets Magazine

ಕ್ಯಾಪ್ಟನ್ ಧೋನಿಗೇ ಟಾಂಗ್ ಕೊಟ್ಟರಾ ಹರ್ಭಜನ್ ಸಿಂಗ್!

ಚೆನ್ನೈ| Krishnaveni K| Last Modified ಸೋಮವಾರ, 25 ಮಾರ್ಚ್ 2019 (09:01 IST)
ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆದ ಚೆನ್ನೈ ಮೈದಾನದ ಪಿಚ್ ಗುಣಮಟ್ಟದ ಬಗ್ಗೆ ಉಭಯ ತಂಡದ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಧೋನಿ ಅಸಮಾಧಾನ ವ್ಯಕ್ತಪಡಿಸಿದ್ದರು.
 
ಈ ಪಿಚ್ ಸ್ವಲ್ಪವೂ ಬ್ಯಾಟಿಂಗ್ ಗೆ ಅನುಕೂಲಕರವಾಗಿರಲಿಲ್ಲ ಎಂಬುದು ಉಭಯ ನಾಯಕರ ಕಂಪ್ಲೇಂಟ್ ಆಗಿತ್ತು. ಆದರೆ ಇವರಿಬ್ಬರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಈ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
 
‘ಸ್ಕೋರ್ ಬೋರ್ಡ್ ನಲ್ಲಿ ರನ್ ಸಾಕಷ್ಟು ಆದಾಗ ಯಾರೂ ಪಿಚ್ ಬಗ್ಗೆ ಕಂಪ್ಲೇಂಟ್ ಮಾಡಲ್ಲ. ಆದರೆ ಸ್ಪಿನ್ನರ್ ಅಥವಾ ವೇಗಿಗಳಿಗೆ ಪಿಚ್ ಸಹಾಯ ಮಾಡುತ್ತದೆ ಎಂದರೆ ಮಾತ್ರ ಎಲ್ಲರೂ ಪಿಚ್ ಬಗ್ಗೆ ದೂರುತ್ತಾರೆ. ನನ್ನ ಪ್ರಕಾರ ಇದು ಕೆಟ್ಟ ಪಿಚ್ ಆಗಿರಲಿಲ್ಲ. ಬೌಲರ್ ಗಳಿಗೂ ಕ್ರಿಕೆಟ್ ನಲ್ಲಿ ಸ್ಥಾನವಿದೆ ಎಂದು ಎಲ್ಲರೂ ಮರೆಯುತ್ತಾರೆ. ಒಮ್ಮೊಮ್ಮೆ ಬ್ಯಾಟ್ಸ್ ಮನ್ ಗಳೂ ಕಷ್ಟಪಡಬೇಕು’ ಎಂದು ಭಜಿ ಹೇಳಿದ್ದಾರೆ. ಈ ಮೂಲಕ ತಮ್ಮ ನಾಯಕನ ಅಭಿಪ್ರಾಯಕ್ಕೇ ಟಾಂಗ್ ಕೊಟ್ಟಂತೆ ಮಾತನಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :