ಕಿಂಗ್ಸ್ ಇಲೆವೆನ್ ಪಂಜಾಬ್ ನಿಷೇಧಕ್ಕೊಳಗಾದರೆ ಆರ್ ಸಿಬಿ ಲಾಭ!

ಮುಂಬೈ, ಸೋಮವಾರ, 6 ಮೇ 2019 (07:42 IST)

ಮುಂಬೈ: ಮಾಲಿಕ ನೆಸ್ ವಾಡಿಯಾ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರಣ, ಕಿಂಗ್ಸ್ ಇಲೆವೆನ್ ಪಂಜಾಬ್ ಮುಂದಿನ ಐಪಿಎಲ್ ಗೆ ನಿಷೇಧದ ಭೀತಿಯಲ್ಲಿದೆ.


 
ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡದ ಮಾಲಿಕ, ಆಟಗಾರರು ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಕೊಂಡರೆ ಆ ತಂಡವೇ ನಿಷೇಧದವರೆಗಿನ ಶಿಕ್ಷೆಗೊಳಗಾಗಬೇಕಾಗುತ್ತದೆ. ಹೀಗಾಗಿ ಪಂಜಾಬ್ ಕೂಡಾ ಭೀತಿಯಲ್ಲಿದೆ.
 
ಒಂದು ವೇಳೆ ಪಂಜಾಬ್ ಮುಂದಿನ ವರ್ಷಕ್ಕೆ ನಿಷೇಧಕ್ಕೊಳಗಾದರೆ ಆರ್ ಸಿಬಿಗೆ ಲಾಭವಾಗಬಹುದು. ಆರ್ ಸಿಬಿಯಿಂದ ಪಂಜಾಬ್ ಪಾಳಯ ಸೇರಿಕೊಂಡಿರುವ ಕ್ರಿಸ್ ಗೇಲ್, ಕೆಎಲ್ ರಾಹುಲ್ ಮತ್ತೆ ಮರಳಿ ಗೂಡಿಗೆ ಬರಬಹುದು. ಇವರಿಬ್ಬರೂ ಸ್ಟಾರ್ ಆಟಗಾರರನ್ನು ಕೈ ಬಿಟ್ಟ ಆರ್ ಸಿಬಿ ಈಗ ಪಶ್ಚಾತ್ತಾಪ ಪಡುತ್ತಿದೆ. ಹೀಗಾಗಿ ಮತ್ತೊಂದು ಅವಕಾಶ ಸಿಕ್ಕರೆ ಆರ್ ಸಿಬಿ ಈ ಆಟಗಾರರನ್ನು ಎರಡೂ ಕೈ ಬಾಚಿ ಕರೆಸಿಕೊಳ್ಳುವುದು ಖಚಿತ. ಹೀಗಾಗಿ ಪಂಜಾಬ್ ನಿಷೇಧಕ್ಕೊಳಗಾದರೆ ಲಾಭ ಪಡೆಯುವುದು ಆರ್ ಸಿಬಿ ಆಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೋತು ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ವಿರಾಟ್ ಕೊಹ್ಲಿ

ಬೆಂಗಳೂರು: ಸೋತು ಸುಣ್ಣವಾದ ಮೇಲೂ, ಅಭಿಮಾನಿಗಳಿಂದ ಛೀ ಥೂ ಎನಿಸಿಕೊಂಡರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

news

34 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಲಿರುವ ಸುನಿಲ್ ಗವಾಸ್ಕರ್

ಮುಂಬೈ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ 34 ಮಕ್ಕಳ ಹೃದಯ ...

news

ಶಾಹಿದ್ ಅಫ್ರಿದಿಯನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯಬೇಕು ಎಂದ ಗೌತಮ್ ಗಂಭೀರ್

ನವದೆಹಲಿ: ತಮ್ಮ ಆತ್ಮಕತೆಯಲ್ಲಿ ಗೌತಮ್ ಗಂಭೀರ್ ರನ್ನು ಜರೆದಿದ್ದ ಶಾಹಿದ್ ಅಫ್ರಿದಿಗೆ ಈಗ ಗಂಭಿರ್ ...

news

ಚೀರ್ ಲೀಡರ್ಸ್ ಗಳಿಗೆ ಧೋನಿ ಸ್ಪೆಷಲ್ ಟ್ರೀಟ್ ಮೆಂಟ್!

ಚೆನ್ನೈ: ಐಪಿಎಲ್ ನಲ್ಲಿ ಧೋನಿ ಚೆನ್ನೈ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಜತೆಗೆ ಮೈದಾನ ಸಿಬ್ಬಂದಿಗೂ ...