Widgets Magazine

ಐಪಿಎಲ್: ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೆ 12 ಲಕ್ಷ ದಂಡದ ಶಿಕ್ಷೆ!

ಜೈಪುರ| Krishnaveni K| Last Modified ಮಂಗಳವಾರ, 2 ಏಪ್ರಿಲ್ 2019 (05:56 IST)
ಜೈಪುರ: ಚೆನ್ನೈ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ಎಸೆದಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
 
ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದೇ ಶಿಕ್ಷೆಗೊಳಗಾಗಿದ್ದರು. ಈಗ ರೆಹಾನೆ ಸರದಿ. ಇದು ರೆಹಾನೆಯವರ ಮೊದಲ ತಪ್ಪಾಗಿರುವುದರಿಂದ ದಂಡ ಇಷ್ಟಕ್ಕೇ ಸೀಮಿತಗೊಂಡಿದೆ. ಈ ಕುರಿತು ಐಪಿಎಲ್ ಆಡಳಿತ ಮಂಡಳಿ ಪ್ರಕಟಣೆ ಬಿಡುಗಡೆ ಮಾಡಿದೆ.
 
ಈಗಾಗಲೇ ಎರಡು ಪಂದ್ಯ ಸೋತಿರುವ ರಾಜಸ್ಥಾನ್ ಇದೀಗ ಇಂದು ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಸೋತು ಸುಣ್ಣವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಡಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :