ಕೋಲ್ಕೊತ್ತಾ: ಸೋಲು ಎಂತಹವರನ್ನೇ ಆದರೂ ಧೃತಿಗೆಡಿಸುತ್ತದೆ. ಇದೀಗ ಆರು ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದೊಳಗೇ ಅಸಮಾಧಾನ ಭುಗಿಲೆದ್ದಿರುವುದು ಕಂಡುಬರುತ್ತಿದೆ.ಕೆಕೆಆರ್ ಪರ ಅದ್ಭುತ ಫಾರ್ಮ್ ನಲ್ಲಿರುವ ಆಂಡ್ರೆ ರಸೆಲ್ ಮಾತಿನಲ್ಲೇ ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ರಸೆಲ್ ತಮ್ಮ ತಂಡದ ಕೆಟ್ಟ ನಿರ್ಧಾರಗಳನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ.ನಾವು ಒಂದು ಉತ್ತಮ ತಂಡ ಹೊಂದಿದ್ದೇವೆ. ಆದರೆ ಕೆಟ್ಟ ನಿರ್ಧಾರಗಳಿಂದ ಸೋಲುತ್ತಿದ್ದೇವೆ. ಒಬ್ಬ ವೃತ್ತಿಪರ ಕ್ರಿಕೆಟಿಗನಾಗಿ