ಮುಂಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಟಂಪ್ ಹಿಂದುಗಡೆ ನಿಂತು ಆಡಿದ ಮಾತೊಂದು ಮ್ಯಾಚ್ ಫಿಕ್ಸಿಂಗ್ ಗುಮಾನಿ ಹುಟ್ಟಲು ಕಾರಣವಾಗಿತ್ತು.ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಿಷಬ್, ರಾಬಿನ್ ಉತ್ತಪ್ಪ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಎಸೆತ ಈಗ ಬೌಂಡರಿ ಆಗಲಿದೆ ಎಂದು ಮೊದಲೇ ಅಂದಾಜಿಸಿ ಮಾತನಾಡಿದ್ದು ಸ್ಟಂಪ್ ಮೈಕ್ರೋಫೋನ್ ನಲ್ಲಿ ಸ್ಪಷ್ಟವಾಗಿತ್ತು. ಅಚ್ಚರಿಯೆಂದರೆ ಉತ್ತಪ್ಪ ಆ ಎಸೆತವನ್ನು