ಐಪಿಎಲ್: ಒಂದೇ ಎಸೆತ ಬಾಕಿ ಇರುವಾಗ ಗೆದ್ದ ಸಿಎಸ್ ಕೆ

ಚೆನ್ನೈ, ಬುಧವಾರ, 24 ಏಪ್ರಿಲ್ 2019 (07:32 IST)

ಚೆನ್ನೈ: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಒಂದೇ ರನ್ ಗೆ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಒಂದು ಎಸೆತ ಬಾಕಿ ಇರುವಾಗ ಗೆದ್ದುಕೊಂಡಿದೆ.


 
ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಡೇವಿಡ್ ವಾರ್ನರ್ (57) ಮತ್ತು ಮನೀಶ್ ಪಾಂಡೆ (83) ಅಬ್ಬರ ಬ್ಯಾಟಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈಗೆ ಶೇನ್ ವ್ಯಾಟ್ಸನ್ ಅಬ್ಬರ ಸಹಾಯ ಮಾಡಿತು. ವ್ಯಾಟ್ಸನ್ 53 ಎಸೆತಗಳಲ್ಲಿ 96 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಸುರೇಶ್ ರೈನಾ 38 ಮತ್ತು ಅಂಬಟಿ ರಾಯುಡು 21 ರನ್ ಗಳಿಸಿದರು. ಅಂತಿಮವಾಗಿ ಸಿಎಸ್ ಕೆ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದರೊಂದಿಗೆ 6 ವಿಕೆಟ್ ಗಳ ಜಯ ಸಾಧಿಸಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಕೆಕೆಆರ್ ನಾಯಕ ಸೇರಿ ಐವರಿಗೆ ಬ್ರೇಕ್

ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ನಲ್ಲಿ ಸಾಧಾರಣ ಪ್ರದರ್ಶನ ನೀಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ ...

news

ಬದಲಾದ ಬ್ಯಾಟಿಂಗ್ ಶೈಲಿಗೆ ಶಿಖರ್ ಧವನ್ ಕೊಟ್ಟ ಫನ್ನಿ ಕಾರಣವೇನು ಗೊತ್ತಾ?

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಬದಲಾದ ...

news

ನಿಮ್ಮ ಫೇವರಿಟ್ ಕೋಚ್ ಗಂಗೂಲಿಯಾ? ರಿಕಿ ಪಾಂಟಿಂಗ್? ಎಂಬ ಪ್ರಶ್ನೆಗೆ ರಿಷಬ್ ಪಂತ್ ಉತ್ತರ ಕೇಳಿ ಬೇಸ್ತಾದ ಕಮೆಂಟೇಟರ್ ಗಳು!

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈಗ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ...

news

ಐಪಿಎಲ್: ನಾಯಕ ಬದಲಾದ ಕೂಡಲೇ ರಾಜಸ್ಥಾನ್ ರಾಯಲ್ಸ್ ಲಕ್ ಬದಲಾಯಿತು!

ಜೈಪುರ: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ...