ಟ್ವಿಟರ್ ಟ್ವೀಟ್ ನಲ್ಲೂ ದಾಖಲೆ ಮಾಡಿದ ಐಪಿಎಲ್

ಮುಂಬೈ, ಬುಧವಾರ, 15 ಮೇ 2019 (08:43 IST)

ಮುಂಬೈ: ಐಪಿಎಲ್ ನಲ್ಲಿ ಕ್ರಿಕೆಟಿಗರು ಮಾತ್ರವಲ್ಲ, ಈ ಬಾರಿಯ ಆವೃತ್ತಿಯಲ್ಲಿ ಐಪಿಎಲ್ ನನ್ನು ಮೆಚ್ಚಿ ವೀಕ್ಷಿಸುವ ವೀಕ್ಷಕರೂ ಹೊಸ ದಾಖಲೆ ಮಾಡಿದ್ದಾರೆ. ಅದೇನೆಂದು ಗೊತ್ತಾ?


 
ಟ್ವಿಟರ್ ನಲ್ಲಿ ಐಪಿಎಲ್ ಪಂದ್ಯ, ಆಟಗಾರರ ಬಗ್ಗೆ ಚರ್ಚೆ, ಟ್ರೋಲ್, ಕಾಮೆಂಟ್ ಗಳು ನಡೆಯುತ್ತಲೇ ಇರುತ್ತವೆ. ಇದೀಗ ಇದುವೇ ದಾಖಲೆಯಾಗಿಬಿಟ್ಟಿದೆ.
 
ಈ ಬಾರಿ ಐಪಿಎಲ್ ಸಂದರ್ಭದಲ್ಲಿ ಐಪಿಎಲ್ ಸಂಬಂಧಿತ ಟ್ವೀಟ್ ಗಳು ಅತೀ ಹೆಚ್ಚು ಬಂದಿದ್ದು, ದಾಖಲೆ ಸೃಷ್ಟಿಸಿದೆ. ಸುಮಾರು 27 ಮಿಲಿಯನ್ ಟ್ವೀಟ್ ಗಳು ದಾಖಲಾಗಿದ್ದು, ಇದು 2018 ರ ಆವೃತ್ತಿಗೆ ಹೋಲಿಸಿದರೆ ಶೇ.44 ರಷ್ಟು ಹೆಚ್ಚಳವಾಗಿದೆ.
 
ಆ ಮೂಲಕ ಸರ್ವಕಾಲಿಕ ದಾಖಲೆ ಮಾಡಿದೆ. ಅದರಲ್ಲೂ ಐಪಿಎಲ್ ನ ಗೋಲ್ಡನ್ ಟ್ವೀಟ್ ಎಂದರೆ ಮುಂಬೈ ಇಂಡಿಯನ್ ಆಟಗಾರ ಹಾರ್ದಿಕ್ ಪಾಂಡ್ಯ ಚೆನ್ನೈ ನಾಯಕ ಧೋನಿಯನ್ನು ಗೆಳೆಯ ಎಂದು ಸ್ವೀಕರಿಸಿದ್ದು. ಈ ಟ್ವೀಟ್ ಸುಮಾರು 16 ಸಾವಿರಕ್ಕೂ ಅಧಿಕ ರಿಟ್ವೀಟ್ ಕಂಡಿದೆ. ಫೈನಲ್ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ಅತೀ ಹೆಚ್ಚು ಟ್ವಿಟರ್ ನಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ, ಚೆನ್ನೈ ತಂಡದ ಬಗ್ಗೆ ಅತೀ ಹೆಚ್ಚು ಜನ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಸಿಸಿಯ ಮೊದಲ ಮಹಿಳಾ ರೆಫರಿಯಾಗಿ ಭಾರತದ ಜಿಎಸ್ ಲಕ್ಷ್ಮಿ ಆಯ್ಕೆ

ದುಬೈ: ಐಸಿಸಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮಹಿಳಾ ರೆಫರಿಯೊಬ್ಬರನ್ನು ನೇಮಕ ಮಾಡಿದ್ದು, ...

news

ರೋಹಿತ್ ಶರ್ಮಾ ನನ್ನ ಪತ್ನಿಯಲ್ಲ ಎಂದು ಶಿಖರ್ ಧವನ್ ಹೇಳಿದ್ದೇಕೆ ಗೊತ್ತಾ?

ಮುಂಬೈ: ವಿಶ್ವಕಪ್ ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು ತಯಾರಿ ಬಗ್ಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ...

news

ತೀರ್ಪು ತಮ್ಮ ಪರ ಬರಲು ಅಂಪಾಯರ್ ಗೆ ಆಮಿಷ ಒಡ್ಡಿದ್ದರಂತೆ ಅನಿಲ್ ಕುಂಬ್ಳೆ!

ಮುಂಬೈ: ಕ್ರಿಕೆಟ್ ನ ಜಂಟಲ್ ಮ್ಯಾನ್ ಕ್ರಿಕೆಟಿಗರ ಪೈಕಿ ಅಗ್ರ ಸಾಲಿನಲ್ಲಿ ನಿಲ್ಲುವ ಸ್ಪಿನ್ ದಿಗ್ಗಜ ಅನಿಲ್ ...

news

ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಆಡಿದ್ದ ಶೇನ್ ವ್ಯಾಟ್ಸನ್

ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲದೇ ಇದ್ದರೂ ಶೇನ್ ವ್ಯಾಟ್ಸನ್ ಅಬ್ಬರದ ...