ಐಪಿಎಲ್: ಧೋನಿ ಮಿಂಚಿಂಗ್ ಸ್ಟಂಪಿಂಗ್! ಡೆಲ್ಲಿ ಕತೆ ಗೋತಾ

ಚೆನ್ನೈ, ಗುರುವಾರ, 2 ಮೇ 2019 (07:10 IST)

ಚೆನ್ನೈ: ನಾಯಕ ಧೋನಿಯ ಆಲ್ ರೌಂಡರ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನ್ನು 80 ರನ್ ಗಳಿಂದ ಸೋಲುಣಿಸಿದೆ.


 
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ 37 ಎಸೆತಗಳಲ್ಲಿ 59 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ಸಿಡಿದ ಧೋನಿ 22 ಎಸೆತಗಳಲ್ಲಿ 44 ರನ್ ಗಳಿಸಿ ಮೊತ್ತ ಉಬ್ಬಲು ನೆರವಾದರು.
 
ಈ ಮೊತ್ತ ಬೆನ್ನತ್ತಿದ ಡೆಲ್ಲಿ ಧೋನಿಯ ಎರಡು ಮಿಂಚಿಂಗ್ ಸ್ಟಂಪಿಂಗ್ ಗೆ ಕುಸಿಯಿತು. ಅಲ್ಲದೆ ಸ್ಪಿನ್ನರ್ ಗಳಾದ ಇಮ್ರಾನ್ ತಾಹಿರ್ (4 ವಿಕೆಟ್), ರವೀಂದ್ರ ಜಡೇಜಾ (3 ವಿಕೆಟ್) ಕಬಳಿಸಿ ಎದುರಾಳಿಗಳನ್ನು 16.2 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಮಾಡಿದರು. ಇದರಿಂದಾಗಿ ಚೆನ್ನೈ ಪ್ರಬಲ ಡೆಲ್ಲಿ ವಿರುದ್ಧ  80 ರನ್ ಗಳ ಭರ್ಜರಿ ಜಯ ದಾಖಲಿಸಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಹೈದಾರಾಬಾದ್ ಬಿಟ್ಟು ತೆರಳಿದ ಡೇವಿಡ್ ವಾರ್ನರ್ ಗೆ ಭಾವುಕ ವಿದಾಯ ಹೇಳಿದ ತಂಡ

ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಮಹತ್ವದ ಟೂರ್ನಿಗೆ ...

news

ವಿರಾಟ್ ಕೊಹ್ಲಿಗೆ ಡೌಟು ಬಂದರೆ ಪರಿಹರಿಸುವುದು ನಾನೇ ಎಂದ ರೋಹಿತ್ ಶರ್ಮಾ

ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಏನೇ ಸಮಸ್ಯೆ, ಅನುಮಾನ ಬಂದರೂ ಪರಿಹರಿಸುವುದು ನನ್ನ ...

news

ಐಪಿಎಲ್: ಅಂಕ ಪಟ್ಟಿಯಲ್ಲಿ ಹಿಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿನ ಹಳಿಗೆ ಬಂದಿದ್ದರ ಗುಟ್ಟೇನು?

ನವದೆಹಲಿ: ಕಳೆದ ಬಾರಿ ಐಪಿಎಲ್ ನಲ್ಲಿ ಹೆಚ್ಚೇನೂ ಪರಿಣಾಮ ಬೀರಿರದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಹೊಸ ...

news

ಐಪಿಎಲ್: ಬೆಂಗಳೂರು ಪ್ಲೇ ಆಫ್ ಕನಸಿಗೆ ನೀರು ಹುಯ್ದ ವರುಣ

ಬೆಂಗಳೂರು: ಈ ಬಾರಿ ನಿರಾಶಾದಾಯಕ ಪ್ರದರ್ಶನದೊಂದಿಗೆ ಐಪಿಎಲ್ ಕೂಟ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...