ನವದೆಹಲಿ: ಮೊನ್ನೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಂತರಿಕ ಅಭ್ಯಾಸ ಪಂದ್ಯವಾಡಿದಾಗ ಚೆನ್ನೈ ಮೈದಾನದಲ್ಲಿ 12 ಸಾವಿರ ಅಭಿಮಾನಿಗಳು ಸೇರಿದ್ದು ಭಾರೀ ಸುದ್ದಿಯಾಗಿತ್ತು.ಈ ರೀತಿ ತಂಡದೊಳಗೇ ಅಭ್ಯಾಸ ಪಂದ್ಯಗಳನ್ನು ಆಯೋಜಿಸುವುದು ಸಾಮಾನ್ಯ ಸಂಗತಿ. ಆದರೆ ಚೆನ್ನೈ ಅಭಿಮಾನಿಗಳು ಧೋನಿ ಸೇರಿದಂತೆ ತಮ್ಮ ಸಿಎಸ್ ಕೆ ತಂಡದ ಮೆಚ್ಚಿನ ಆಟಗಾರರ ಅಭ್ಯಾಸ ನೋಡಲು ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದು ಭಾರೀ ಸುದ್ದಿಯಾಗಿತ್ತು.ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಎರಡು ಅಭ್ಯಾಸ ಪಂದ್ಯ ಆಡಿದೆ.