ನವದೆಹಲಿ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 16 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದೆ.ಈ ಗೆಲುವಿನ ಸಂಭ್ರಮವನ್ನು ಡೆಲ್ಲಿ ಆಟಗಾರ ಶಿಖರ್ ಧವನ್ ನೃತ್ಯ ಮಾಡಿ ಸಂಭ್ರಮಿಸಿದರೆ, ಸಹ ಆಟಗಾರರೂ ಅವರಿಗೆ ಸಾಥ್ ನೀಡಿದ್ದಾರೆ. ಅವರ ಈ ಸಂಭ್ರಮಕ್ಕೆ ಕಾರಣವೂ ಇಲ್ಲದಿಲ್ಲ. ಈ ಗೆಲುವಿನೊಂದಿಗೆ ಡೆಲ್ಲಿ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯಿತು. ಹೀಗಾಗಿಯೇ ಡೆಲ್ಲಿ ಆಟಗಾರರ ಖುಷಿ ಹೆಚ್ಚಾಗಿತ್ತು.ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ