ಐಪಿಎಲ್: ದಿಲ್ಲಿಯಲ್ಲಿ ಚೆನ್ನೈ ದಡ ಮುಟ್ಟಿಸಿದ ಧೋನಿ

ನವದೆಹಲಿ, ಬುಧವಾರ, 27 ಮಾರ್ಚ್ 2019 (09:06 IST)

ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ.


 
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಧೋನಿ ಪಡೆ 6 ವಿಕೆಟ್ ಗಳ ಗೆಲುವು ದಾಖಲಿಸಿದೆ. ಧೋನಿ ಅಜೇಯರಾಗಿ 32 ರನ್ ಬಾರಿಸಿ ಕೊನೆಯವರೆಗೂ ಕ್ರೀಸ್ ನಲ್ಲಿ ಉಳಿದು ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ.
 
ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತ್ತು. ಚೆನ್ನೈ ಪರ ಡ್ವಾನ್ ಬ್ರಾವೋ ಮಾರಕ ದಾಳಿ ಸಂಘಟಿಸಿ 3 ವಿಕೆಟ್ ಕಿತ್ತರು. ಈ ಸಾಧಾರಣ ಮೊತ್ತ ಬೆನ್ನತ್ತುವುದು ಸಿಎಸ್ ಕೆ ಸುಲಭವಾಗಲಿಲ್ಲ.
 
ಆರಂಭದಲ್ಲಿಯೇ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ರನ್ ಕೂಡಾ ಅಷ್ಟೊಂದು ಹರಿದುಬರುತ್ತಿರಲಿಲ್ಲ. ಇನ್ನೊಬ್ಬ ಆರಂಭಿಕ ಶೇನ್ ವ್ಯಾಟ್ಸನ್ 44 ರನ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ 30 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಬಳಿಕ ಧೋನಿ ತಂಡವನ್ನು ಎಚ್ಚರಿಕೆಯಿಂದ ಗೆಲುವಿನ ದಡ ಮುಟ್ಟಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರವಿಚಂದ್ರನ್ ಅಶ್ವಿನ್ ಬೆನ್ನಿಗೆ ಚೂರಿ ಇರಿದರು ಎಂದ ಬಿಸಿಸಿಐ ಅಧಿಕಾರಿ

ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಮಾಂಕಡೆಡ್ ಔಟ್ ಮಾಡಿದ ರವಿಚಂದ್ರನ್ ...

news

ವಿವಾದ ಸೃಷ್ಟಿಸಿದ ರವಿಚಂದ್ರನ್ ಅಶ್ವಿನ್ ವಿರುದ್ಧ ಶೇನ್ ವಾರ್ನ್ ಕಿಡಿ

ಜೈಪುರ: ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ...

news

ಐಪಿಎಲ್ ನಲ್ಲಿ ಹೊಸ ವಿವಾದ ಸೃಷ್ಟಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್

ಜೈಪುರ: ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನನ್ನು ವಿವಾದಾತ್ಮಕವಾಗಿ ಔಟ್ ...

news

ಐಪಿಎಲ್: ರಾಜಸ್ಥಾನ ವಿರುದ್ಧ ಕ್ರಿಸ್ ಗೇಲ್ ಅಬ್ಬರ, ಕೆಎಲ್ ರಾಹುಲ್ ಠುಸ್ ಪಟಾಕಿ

ಜೈಪುರ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 14 ರನ್ ಗಳ ...