Widgets Magazine

ಐಪಿಎಲ್: ರಾಜಸ್ಥಾನಕ್ಕೆ ಶಾಕ್ ಕೊಟ್ಟ ಧೋನಿ, ಬ್ರಾವೋ

ಚೆನ್ನೈ| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (09:30 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಾಗಲೋಟಕ್ಕೆ ನಿನ್ನೆ ರಾಜಸ್ಥಾನ್ ರಾಯಲ್ಸ್ ಕಡಿವಾಣ ಹಾಕುತ್ತೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬ್ರಾವೋ ಮ್ಯಾಜಿಕ್ ಚೆನ್ನೈ ಗೆಲುವಿನ ಓಟ ಮುಂದುವರಿಯುವ ಹಾಗೆ ಮಾಡಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಶೋಷನೀಯ ಸ್ಥಿತಿಯಲ್ಲಿತ್ತು. ಒಂದು ಹಂತದಲ್ಲಿ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಇಂದು ಚೆನ್ನೈ ಕತೆ ಆರ್ ಸಿಬಿ ತಂಡದ ಹಾಗಾಗಿದೆ ಎಂದು ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿದ್ದರು.
 
ಆದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕನ ಆಟವಾಡಿದ ಧೋನಿ 46 ಎಸೆತಗಳಿಂದ 75 ರನ್ ಸಿಡಿಸಿದರೆ ಸುರೇಶ್ ರೈನಾ 36 ರನ್ ಗಳಿಸಿ ಅವರಿಗೆ ಉತ್ತಮ ಸಾಥ್ ನೀಡಿದರು. ಇವರ ಭರ್ಜರಿ ಆಟದಿಂದಾಗಿ ಚೆನ್ನೈ ನಿಗತಿದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಆರಂಭವೂ ಉತ್ತಮವಾಗಿರಲಿಲ್ಲ. ಆದರೆ ಕೆಳ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ 46 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸಿದ್ದರು. ಆದರೆ ಅಂತಿಮ ಓವರ್ ಎಸೆಯಲು ಬಂದ ಡ್ವಾನ್ ಬ್ರಾವೋ ಕೇವಲ 3 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನವನ್ನು 167 ರನ್ ಗಳಿಗೆ ನಿಯಂತ್ರಿಸಿದರು. ಆ ಮೂಲಕ ಚೆನ್ನೈ ರೋಚಕವಾಗಿ 8 ರನ್ ಗಳಿಂದ ಸೋಲಿಸಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :