ಜೈಪುರ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಂಪಾಯರ್ ವಿರುದ್ಧ ವಾಗ್ವಾದಕ್ಕಿಳಿದ ತಪ್ಪಿಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ದಂಡ ವಿಧಿಸಲಾಗಿದೆ.ಸಾಮಾನ್ಯವಾಗಿ ಧೋನಿ ಈ ರೀತಿ ಮೈದಾನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ದಂಡ ಹಾಕಿಸಿಕೊಂಡಿದ ಉದಾಹರಣೆಯೇ ಇಲ್ಲ. ಆದರೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನೋ ಬಾಲ್ ಒಮ್ಮೆ ನೀಡಿ ನಂತರ ಇಲ್ಲ ಎಂದು ಎಡವಟ್ಟು ಮಾಡಿದ ಅಂಪಾಯರ್ ವಿರುದ್ಧ ಮೈದಾನ ಪ್ರವೇಶಿಸಿ ವಾಗ್ವಾದಕ್ಕಿಳಿದಿದ್ದರು.ಇದೇ ಕಾರಣಕ್ಕೆ ಧೋನಿಗೆ ಪಂದ್ಯದ ಸಂಭಾವನೆಯ