ಐಪಿಎಲ್: ಕ್ವಾಲಿಫೈಯರ್ ಸೋತಿದ್ದಕ್ಕೆ ಬ್ಯಾಟ್ಸ್ ಮನ್ ಗಳ ಮೇಲೆ ಧೋನಿ ಸಿಟ್ಟು

ಚೆನ್ನೈ, ಬುಧವಾರ, 8 ಮೇ 2019 (08:30 IST)

ಚೆನ್ನೈ: ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮನ್ ಗಳ ಮೇಲೆ ನಾಯಕ ಧೋನಿ ಸಿಟ್ಟು ಹೊರಹಾಕಿದ್ದಾರೆ.


 
ಸೋಲಿಗೆ ಬ್ಯಾಟ್ಸ್ ಮನ್ ಗಳ ವೈಫಲ್ಯವೇ ಕಾರಣ ಎಂದು ಧೋನಿ ಗೂಬೆ ಕೂರಿಸಿದ್ದಾರೆ. ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಬ್ಯಾಟ್ಸ್ ಮನ್ ಗಳು ಕೇವಲ 131 ರನ್ ಗಳಷ್ಟೇ ಕಲೆ ಹಾಕಿದ್ದರು. ಇದು ಮುಂಬೈಗೆ ಸುಲಭ ತುತ್ತಾಗಿತ್ತು.
 
‘ತವರಿನಲ್ಲಿ ಪಿಚ್ ಹೇಗೆ ವರ್ತಿಸುತ್ತದೆ, ಬಾಲ್ ಹೇಗೆ ಬ್ಯಾಟ್ ಗೆ ಬರುತ್ತಿದೆ, ಪಿಚ್ ಕಂಡೀಷನ್ ಹೇಗೆ ಎಂದು ನಮಗೆ ಗೊತ್ತಿರಬೇಕು. ಅದಕ್ಕೇ ತವರಿನ ಬಲ ಎನ್ನುತ್ತೇವೆ. ಆದರೆ ನಾವು ಅದರಲ್ಲೇ ವಿಫಲರಾಗಿದ್ದೇವೆ. ಅದೂ 6-7 ಪಂದ್ಯವಾಡಿದ ಮೇಲೆ ಗೊತ್ತಾಗಲೇಬೇಕು. ನಮ್ಮ ಕೆಲವು ಬ್ಯಾಟ್ಸ್ ಮನ್ ಗಳಿಗೆ ಯಾವಾಗ ಹೇಗೆ ಆಡಬೇಕೆಂದು ಗೊತ್ತಿದೆ. ಆದರೆ ಅವರೇ ತಪ್ಪು ಮಾಡಿದರು. ಮುಂದಿನ ಪಂದ್ಯದಲ್ಲಿ ಈ ತಪ್ಪು ಸರಿ ಹೋಗಬಹುದು ಅಂದುಕೊಳ್ಳುತ್ತೇನೆ’ ಎಂದು ಧೋನಿ ಆಕ್ರೋಶ ಹೊರಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪ್ರಶ್ನೆ ಪತ್ರಿಕೆಯಲ್ಲೂ ವಿದ್ಯಾರ್ಥಿಗಳಿಗೆ ಐಪಿಎಲ್ ಕುರಿತ ಪ್ರಶ್ನೆ!

ಚೆನ್ನೈ: ಐಪಿಎಲ್ ಈಗ ಯುವ ಜನರಲ್ಲಿ ಕ್ರೇಜ್ ಮೂಡಿಸಿರುವುದು ಹೊಸತೇನಲ್ಲ. ಆದರೆ ಈ ಐಪಿಎಲ್ ಕ್ರೇಜ್ ಪರೀಕ್ಷೆ ...

news

ತನ್ನ ಸ್ವಾರ್ಥಕ್ಕಾಗಿ ಹಲವು ಕ್ರಿಕೆಟಿಗರ ಜೀವನ ಹಾಳು ಮಾಡಿದ್ದರಂತೆ ಶಾಹಿದ್ ಅಫ್ರಿದಿ!

ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಆತ್ಮಕತೆ ಬರೆದು ಹಲವು ವಿವಾದಗಳಿಗೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟಿಗ ...

news

ಐಪಿಎಲ್: ಧೋನಿ ಪಡೆಗೆ ಶಾಕ್ ಕೊಟ್ಟ ಮುಂಬೈ ಇಂಡಿಯನ್ಸ್ ಫೈನಲ್ ಗೆ

ಚೆನ್ನೈ: ನಿನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ...

news

ಆರ್ ಸಿಬಿ ಮೇಲಿನ ಸಿಟ್ಟಿಗೆ ಡ್ರೆಸ್ಸಿಂಗ್ ರೂಂ ಬಾಗಿಲು ಒಡೆದಿದ್ದ ಅಂಪಾಯರ್ !

ಬೆಂಗಳೂರು: ಆರ್ ಸಿಬಿ ಈ ವರ್ಷದ ಐಪಿಎಲ್ ನ ಕೊನೆಯ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ...