Widgets Magazine

ಐಪಿಎಲ್: ಆರ್ ಸಿಬಿಯಿಂದ ಬೆಂಗಳೂರು ಹೆಸರು ಕಿತ್ತಾಕಿ!

ಬೆಂಗಳೂರು| Krishnaveni K| Last Modified ಸೋಮವಾರ, 1 ಏಪ್ರಿಲ್ 2019 (08:56 IST)
ಬೆಂಗಳೂರು: ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ 118 ರನ್ ಗಳ ಅಂತರದಿಂದ ಹೀನಾಯ ಸೋಲು ಕಾಣುವುದರೊಂದಿಗೆ ಹ್ಯಾಟ್ರಿಕ್ ಸೋಲುಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಭಿಮಾನಿಗಳ ಆಕ್ರೋಶ ಎಲ್ಲೆ ಮೀರಿದೆ.

 
ಮೊದಲು ನಾಯಕನಿಂದ ಹಿಡಿದು ಎಲ್ಲಾ ಆಟಗಾರರನ್ನು ಬದಲಾವಣೆ ಮಾಡಿ ಹೊಸ ತಂಡ ಕಟ್ಟಿ. ಈ ತಂಡ ಯಾವದಕ್ಕೂ ಲಾಯಕ್ಕಿಲ್ಲ. ಹೋರಾಟದ ಲಕ್ಷಣವೇ ತೋರುತ್ತಿಲ್ಲ ಎಂದು ನಾಯಕ ಕೊಹ್ಲಿ ಸೇರಿದಂತೆ ಇಡೀ ತಂಡದ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
 
ಮತ್ತೆ ಕೆಲವರು ನೀವು ಆರ್ ಸಿಬಿ ಎನ್ನುವ ಕಾರಣಕ್ಕೆ ನಾವು ನಿಮ್ಮನ್ನು ಬೆಂಬಲಿಸುತ್ತಿಲ್ಲ. ಬದಲಾಗಿ ನಿಮ್ಮ ತಂಡದ ಹೆಸರಿನ ಜತೆಗೆ ಬೆಂಗಳೂರು ಎಂದಿದೆಯಲ್ಲಾ ಅದೇ ಕಾರಣಕ್ಕೆ ಬೆಂಬಲಿಸುತ್ತಿದ್ದೆವು. ಹೀಗೆ ಸೋತು ಬೆಂಗಳೂರು ಹೆಸರಿನ ಮಾನ ಕಳೆಯಬೇಡಿ. ಮೊದಲು ನಿಮ್ಮ ತಂಡದ ಹೆಸರಿನ ಜತೆಗಿರುವ ಬೆಂಗಳೂರು ಹೆಸರನ್ನು ತೆಗೆದು ಹಾಕಿ ಎಂದು ಅಭಿಮಾನಿಗಳು ಆಕ್ರೋಶದಿಂದಲೇ ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ




ಇದರಲ್ಲಿ ಇನ್ನಷ್ಟು ಓದಿ :