ಐಪಿಎಲ್: ಆರ್ ಸಿಬಿಯಲ್ಲಿ ಕರ್ನಾಟಕದವರು ಇಲ್ಲದೇ ಇದ್ದಿದ್ದಕ್ಕೇ ಈ ಗತಿ ಬಂದಿದೆಯೇ?

ಬೆಂಗಳೂರು| Krishnaveni K| Last Modified ಬುಧವಾರ, 3 ಏಪ್ರಿಲ್ 2019 (09:54 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಕಪ್ ಗೆಲ್ಲದೇ ಇರಬಹುದು. ಆದರೆ ಹಿಂದೆ ದ್ರಾವಿಡ್, ಅನಿಲ್ ಕುಂಬ್ಳೆ ನಾಯಕರಾಗಿದ್ದಾಗ ಆರ್ ಸಿಬಿ ಖದರ್ ಹೇಗಿತ್ತು? ಕಪ್ ಗೆಲ್ಲದೇ ಇದ್ದರೂ ಒಂದು ಪ್ರಬಲ ತಂಡವಾಗಿ ಗುರುತಿಸಿಕೊಂಡಿತ್ತು.
 
ಆದರೆ ಕಳೆದ ಆವೃತ್ತಿಯಿಂದ ಹೆಸರಿಗೆ ಮಾತ್ರ ಬೆಂಗಳೂರು ತಂಡ ಆದರೆ ಈ ತಂಡದಲ್ಲಿ ಕರ್ನಾಟಕದ ಆಟಗಾರರೇ ಇಲ್ಲ. ಇದೇ ಕಾರಣಕ್ಕೇ ಆರ್ ಸಿಬಿ ಈ ಮಟ್ಟಿಗೆ ವೈಫಲ್ಯ ಕಾಣುತ್ತಿದೆಯೇ?
 
ಹಾಗಂತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಕೆಎಲ್ ರಾಹುಲ್ ಆದರೂ ಕರ್ನಾಟಕದವರು ಇದ್ದರು. ಈಗ ಅವರೂ ಪಂಜಾಬ್ ಸೇರಿಕೊಂಡಿದ್ದಾರೆ. ಆರ್ ಸಿಬಿಯಲ್ಲಿ ಕನ್ನಡಿಗ ಆಟಗಾರನೇ ಇಲ್ಲ. ಇನ್ನು ಮುಂದೆ ಆಯಾ ರಾಜ್ಯದ ಒಬ್ಬ ಆಟಗಾರನಾದರೂ ತಂಡದಲ್ಲಿ ಇರಲೇಬೇಕು ಎಂದು ಕಡ್ಡಾಯ ನಿಯಮ ರೂಪಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :