ಜೈಪುರ: ಇದುವರೆಗೆ ಈ ಆವೃತ್ತಿಯ ಐಪಿಎಲ್ ನಲ್ಲಿ ಒಂದೇ ಒಂದು ಜಯಗಳಿಸದೆ ಹ್ಯಾಟ್ರಿಕ್ ಸೋಲುಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ರಾಜಸ್ಥಾನ್ ರಾಯಲ್ಸ್ ಎದುರಾಳಿ.ರಾಜಸ್ಥಾನ್ ಕೂಡಾ ಇದುವರೆಗೆ ನಡೆದ ಪಂದ್ಯದಲ್ಲಿ ಆರ್ ಸಿಬಿಯಷ್ಟು ಹೀನಾಯ ಪ್ರದರ್ಶನವಲ್ಲದಿದ್ದರೂ ಪ್ರಬಲ ತಂಡ ಎನಿಸಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಮೊದಲ ಜಯ ಗಳಿಸಲು ಕೊಹ್ಲಿ ಪಡೆಗೆ ಇದು ಸುವರ್ಣಾವಕಾಶ.ಒಂದು ವೇಳೆ ಇಂದು ಸೋತರೆ ಕೊಹ್ಲಿ ಮತ್ತು ಟೀಂ ಮಾನ ಮೂರು ಕಾಸಿಗೆ ಹರಾಜಾಗಲಿದೆ.