ಚೆನ್ನೈ: ಐಪಿಎಲ್ ಕೂಟದ ಉದ್ಘಾಟನಾ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಗಳ ಸೋಲನುಭಿಸಿದೆ.ಸೋಲಿನೊಂದಿಗೇ ಆರ್ ಸಿಬಿ ಅಭಿಯಾನ ಆರಂಭವಾಗಿದೆ. ಆದರೆ ಸೋಲಿನ ಬಳಿಕ ಪಿಚ್ ಗುಣಮಟ್ಟದ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅದೇನೇ ಇದ್ದರೂ ಇಲ್ಲಿ ಧೋನಿ ಜಾಣ ನಾಯಕತ್ವದಿಂದಾಗಿಯೇ ಆರ್ ಸಿಬಿ ಬ್ಯಾಟಿಂಗ್ ವೈಫಲ್ಯ ಕಂಡಿತು ಎಂದರೆ ತಪ್ಪಾಗಲಾರದು.