ಹೈದರಾಬಾದ್: ವಿಶ್ವಕಪ್ ಕ್ರಿಕೆಟ್ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಮಹತ್ವದ ಟೂರ್ನಿಗೆ ತಯಾರಾಗಲು ಒಬ್ಬೊಬ್ಬರೇ ಆಟಗಾರರು ಐಪಿಎಲ್ ನಿಂದ ಹೊರಬರುತ್ತಿದ್ದಾರೆ. ಮೊಯಿನ್ ಅಲಿ, ಸ್ಟಾಯಿನಿಸ್ ಬಳಿಕ ಇದೀಗ ಸನ್ ರೈಸರ್ಸ್ ಹೈದಾರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ ಕೂಡಾ ತಂಡದಿಂದ ಹೊರಬಂದಿದ್ದಾರೆ.ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿರುವ ವಾರ್ನರ್, ಸಿದ್ಧತಾ ಶಿಬಿರಕ್ಕೆ ಹಾಜರಾಗಲು ಐಪಿಎಲ್ ನಿಂದ ಹೊರಬಂದಿದ್ದಾರೆ. ಒಂದು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಮೂಲಕ ಕ್ರಿಕೆಟ್ ಗೆ ಪುನರಾಗಮನ