ಮೊಹಾಲಿ: ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.ಕನ್ನಡಿಗ ಬ್ಯಾಟ್ಸ್ ಮನ್ ಗಳಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಪಂಜಾಬ್, ಮುಂಬೈ ನೀಡಿದ್ದ 176 ರನ್ ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.ರಾಹುಲ್ 57 ಎಸೆತಗಳಲ್ಲಿ 71 ರನ್ ಮತ್ತು ಮಯಾಂಕ್ 21 ಎಸೆತಗಳಲ್ಲಿ 43 ರನ್ ಗಳಿಸಿ ಪಂಜಾಬ್ ಗೆಲುವನ್ನು