ಮೊಹಾಲಿ: ಕೋಲ್ಕೊತ್ತಾ ನೈಟ್ ರೈಡರ್ಸ್ ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದೆ ಎನ್ನುವುದು ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಬಹಿರಂಗಗೊಂಡಿದೆ. ನಾಯಕ ದಿನೇಶ್ ಕಾರ್ತಿಕ್ ಮತ್ತು ಸಹ ಆಟಗಾರ ಆಂಡ್ರೆ ರಸೆಲ್ ಇತ್ತೀಚೆಗಷ್ಟೇ ಪರಸ್ಪರ ಮಾಧ್ಯಮಗಳ ಮೂಲಕ ಟಾಂಗ್ ಕೊಟ್ಟುಕೊಂಡಿದ್ದರು. ಇದೀಗ ನಿನ್ನೆ ನಡೆದ ಪಂದ್ಯದಲ್ಲಿ ನಾಯಕ ಕಾರ್ತಿಕ್ ಸಹ ಆಟಗಾರರ ಮೇಲೆ ವಿಪರೀತ ಕೂಗಾಡುತ್ತಿದ್ದುದು ಕಂಡುಬರುತ್ತಿತ್ತು.ಈ ನಡುವೆ ಕೋಚ್ ಜಾಕಸ್ ಕಾಲಿಸ್ ತಂಡದ ಆಟಗಾರರ ಜತೆಗೆ