ಮುಂಬೈ: ಐಪಿಎಲ್ ನ ಎರಡನೇ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.ಈ ಪಂದ್ಯದಲ್ಲಿ ಎರಡೂ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವವರು ಧೋನಿಯನ್ನೇ ಗುರು ಸಮಾನವಾಗಿ ನೋಡುವವರು ಎನ್ನುವುದು ವಿಶೇಷ. ಆದರೆ ಅವರ ಪೈಕಿ ಡೆಲ್ಲಿ ಆಟಗಾರ ರಿಷಬ್ ಪಂತ್ ಗ್ಲೌಸ್ ತೊಡುವುದು ಪಕ್ಕಾ.ಅವರು ಈಗಾಗಲೇ ಕಿರಣ್ ಮೋರೆ ಬಳಿ ಸಾಕಷ್ಟು ಸಲಹೆ ಸೂಚನೆ ಪಡೆದಿದ್ದು, ಮೊದಲ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿದ್ದಾರೆ.