ಜೈಪುರ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದೆ. ವಿಶೇಷವೆಂದರೆ ಇದುವರೆಗೆ ಒಂದೂ ಗೆಲುವು ಕಾಣದ ಆರ್ ಸಿಬಿ ನಿನ್ನೆಯಂತೂ ಕನ್ನಡಿಗನಿಂದಲೇ ಸೋತಿದೆ!ಆ ಕನ್ನಡಿಗ ಆಟಗಾರ ಶ್ರೇಯಸ್ ಗೋಪಾಲ್. ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಶ್ರೇಯಸ್ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಕಬಳಿಸಿದರು. ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಆಟವಾಡುವ ಶ್ರೇಯಸ್ ನಿನ್ನೆ ಬೆಂಗಳೂರು ತಂಡವನ್ನೇ ಸೋಲಿಸಿದರು.