ಬೆಂಗಳೂರು: ಸತತ ಸೋಲಿನಿಂದ ಟೀಕೆಗೊಳಗಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಪಡೆಯನ್ನು ರೋಚಕ 1 ರನ್ ನಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ಕೊಹ್ಲಿಯನ್ನು ಆರಂಭದಲ್ಲಿಯೇ ಕಳೆದುಕೊಂಡು ಆತಂಕಕ್ಕೀಡಾಯಿತು. ಆದರೆ ಬಳಿಕ ಪಾರ್ಥಿವ್ ಪಟೇಲ್ ಅರ್ಧಶತಕ ಸಿಡಿಸಿ (53) ತಂಡಕ್ಕೆ ಆಧಾರವಾದರು. ಇದರಿಂದಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್