ಐಪಿಎಲ್: ಆರಕ್ಕೆ ಆರು ಸೋತು ಹೀನಾಯ ದಾಖಲೆ ಮಾಡಿದ ಆರ್ ಸಿಬಿ

ಬೆಂಗಳೂರು, ಸೋಮವಾರ, 8 ಏಪ್ರಿಲ್ 2019 (08:49 IST)

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸೋಲುವುದರೊಂದಿಗೆ ಈ ಆವೃತ್ತಿಯಲ್ಲಿ ಎಲ್ಲಾ ಆರು ಪಂದ್ಯಗಳನ್ನು ಸೋತು ಕುಖ್ಯಾತಿಗೊಳಗಾಗಿದೆ.


 
ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ವಿರುದ್ಧ 7 ಎಸೆತಗಳು ಬಾಕಿ ಇರುವಾಗ 4 ವಿಕೆಟ್ ಗಳಿಂದ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ 18.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಆರ್ ಸಿಬಿ ಕೂಟದಲ್ಲಿ ಆಡಿದ ಆರೂ ಪಂದ್ಯಗಳನ್ನು ಸೋತು ಸುಣ್ಣವಾಯಿತು.
 
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಆರಕ್ಕೆ ಆರೂ ಪಂದ್ಯಗಳನ್ನು ಸೋತ ದ್ವಿತೀಯ ತಂಡವೆಂಬ ಕುಖ್ಯಾತಿಗೆ ಒಳಗಾಯಿತು. 2013 ರಲ್ಲಿ ಡೆಲ್ಲಿ ತಂಡ ಈ ಕುಖ್ಯಾತಿ ಅನುಭವಿಸಿತ್ತು. ಇದೀಗ ಆರ್ ಸಿಬಿ ಈ ಮುಜುಗರಕ್ಕೀಡಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಜೋಸೆಫ್ ದಾಖಲೆಯ ಬೌಲಿಂಗ್ ಗೆ ಹೈದರಾಬಾದ್ ಉಡೀಸ್

ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ...

news

ಮಹಿಳೆಯರ ಜತೆ ಕೆಎಲ್ ರಾಹುಲ್ ವರ್ತನೆ ಹೇಗಿರುತ್ತದೆ ಎಂದು ಬಹಿರಂಗಪಡಿಸಿದ ಪ್ರೀತಿ ಜಿಂಟಾ

ಮೊಹಾಲಿ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ ತಪ್ಪಿಗೆ ಇತ್ತೀಚೆಗೆ ವಿವಾದಕ್ಕೀಡಾಗಿದ್ದ ಕ್ರಿಕೆಟಿಗ ...

news

ಐಪಿಎಲ್: ಐದನೇ ಸೋಲಿನೊಂದಿಗೆ ಬೇಡದ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಗಲಿಗೇರಿತು

ಬೆಂಗಳೂರು: ಐಪಿಎಲ್ ನ ಈ ಆವೃತ್ತಿಯಲ್ಲಿ ಒಂದೂ ಜಯದ ಖಾತೆಯೇ ತೆರೆಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ...

news

ಮುಂಬೈ ಇಂಡಿಯನ್ಸ್ ನಿಂದಲೂ ಯುವರಾಜ್ ಸಿಂಗ್ ಕಿತ್ತೊಗೆಯಲು ಆಗ್ರಹ

ಮುಂಬೈ: ಸತತವಾಗಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣಕ್ಕೆ ಟೀಂ ಇಂಡಿಯಾದಿಂದ ಹೊರಬಿದ್ದ ಹಿರಿಯ ...