ನವದೆಹಲಿ: ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂತಾರಲ್ಲ. ಅದೇ ಸ್ಥಿತಿ ಇದೀಗ ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೂ ಎದುರಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಿಕ ನೆಸ್ ವಾಡಿಯಾ ಮಾದಕ ದ್ರವ್ಯ ಪ್ರಕರಣದಲ್ಲಿ ಜಪಾನ್ ನಲ್ಲಿ ಜೈಲು ಶಿಕ್ಷೆಗೊಳಗಾಗುತ್ತಿದ್ದಂತೇ ಇತ್ತ ಪಂಜಾಬ್ ತಂಡವೂ ನಿಷೇಧದ ಭೀತಿಗೆ ಸಿಲುಕಿದೆ.ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡದ ಆಟಗಾರ ಅಥವಾ ಮಾಲಿಕ, ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾದಕ ದ್ರವ್ಯ