Widgets Magazine

ಐಪಿಎಲ್ ಪಂದ್ಯ ಕೆಲ ಕಾಲ ನಿಲ್ಲಿಸಿದ ಪಿಜ್ಜಾ ಡೆಲಿವರಿ ಹುಡುಗ!

ಹೈದರಾಬಾದ್| Krishnaveni K| Last Modified ಭಾನುವಾರ, 31 ಮಾರ್ಚ್ 2019 (09:05 IST)
ಹೈದರಾಬಾದ್: ಐಪಿಎಲ್ ಪಂದ್ಯ ನಡೆಯುತ್ತಿರಬೇಕಾದರೆ ಕೆಲವೊಮ್ಮೆ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡಚಣೆಯಾಗುವುದು ಇದೆ. ಆದರೆ ಇಲ್ಲಿ ಪಿಜ್ಜಾ ಡೆಲಿವರಿ ಬಾಯ್ ನಿಂದಾಗಿ ಪಂದ್ಯ ಕೆಲ ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ.

 
ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಮೈದಾನದೊಳಗಿದ್ದ ಪಿಜ್ಜಾ ಹುಡುಗ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್  ಗೆ ಸೈಟ್ ಸ್ಕ್ರೀನ್ ಗೆ ಅಡ್ಡಲಾಗಿ ಬಂದಿದ್ದ.
 
ಹೀಗಾಗಿ ಸಂಜು ಸ್ಯಾಮ್ಸನ್ ಕ್ರೀಸ್ ನಿಂದ ಹಿಂದೆ ಸರಿದರು. ಅನಿವಾರ್ಯವಾಗಿ ಬೌಲರ್ ವಿಜಯ್ ಶಂಕರ್ ಕ್ಷಣ ಕಾಲ ಕಾಯಬೇಕಾಯಿತು. ಕೊನೆಗೆ ಅಂಪಾಯರ್ ಗಳು ಸನ್ನೆ ಮಾಡಿ ಪಿಜ್ಜಾ ಹುಡುಗನನ್ನು ಸೈಟ್ ಸ್ಕ್ರೀನ್ ನಿಂದ ಪಕ್ಕಕ್ಕೆ ಸರಿಯಲು ಸೂಚನೆ ನೀಡಿದ ಬಳಿಕ ಪಂದ್ಯ ಪುನರಾರಂಭಗೊಂಡಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :