Widgets Magazine

ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಆಡಿದ್ದ ಶೇನ್ ವ್ಯಾಟ್ಸನ್

ಹೈದರಾಬಾದ್| Krishnaveni K| Last Modified ಮಂಗಳವಾರ, 14 ಮೇ 2019 (08:29 IST)
ಹೈದರಾಬಾದ್: ಐಪಿಎಲ್ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲದೇ ಇದ್ದರೂ ಶೇನ್ ವ್ಯಾಟ್ಸನ್ ಅಬ್ಬರದ ಬ್ಯಾಟಿಂಗ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
 

ಇದೀಗ ವ್ಯಾಟ್ಸನ್ ಬಗ್ಗೆ ಚೆನ್ನೈ ಆಟಗಾರ ಹರ್ಭಜನ್ ಸಿಂಗ್ ಮತ್ತೊಂದು ವಿಚಾರ ಬಿಚ್ಚಿಟ್ಟಿದ್ದಾರೆ. ವ್ಯಾಟ್ಸನ್ ಈ ಪಂದ್ಯದಲ್ಲಿ ರನೌಟ್ ತಪ್ಪಿಸಿಕೊಳ್ಳಲು ಡೈವ್ ಹೊಡೆಯುವಾಗ ಕಾಲಿಗೆ ಗಾಯ ಮಾಡಿಕೊಂಡಿದ್ದರಂತೆ. ಹೀಗಾಗಿ ಬ್ಯಾಟಿಂಗ್ ವೇಳೆ ಅವರ ಮೊಣಕಾಲಿನ ಬಳಿ ರಕ್ತ ಸುರಿಯುತ್ತಿತ್ತು.
 
ಹಾಗಿದ್ದರೂ ಈ ವಿಚಾರವನ್ನು ಯಾರಿಗೂ ಹೇಳದೇ ವ್ಯಾಟ್ಸನ್ ಬ್ಯಾಟಿಂಗ್ ಮಾಡಿದ್ದರು. ಆದರೆ ಪಂದ್ಯದ ಬಳಿಕ ವ್ಯಾಟ್ಸನ್ ಕಾಲಿಗೆ 6 ಸ್ಟಿಚ್ ಹಾಕಬೇಕಾಯಿತಂತೆ. ಹಾಗಂತ ಭಜಿ ತಮ್ಮ ಇನ್ ‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :