Widgets Magazine

ಐಪಿಎಲ್: ಶತಕ ಕೈಗೆಟುಕದಿದ್ದರೂ ಶಿಖರ್ ಧವನ್ ತಂಡ ಗೆಲ್ಲಿಸಿದರು

ಕೋಲ್ಕೊತ್ತಾ| Krishnaveni K| Last Modified ಶನಿವಾರ, 13 ಏಪ್ರಿಲ್ 2019 (09:16 IST)
ಕೋಲ್ಕೊತ್ತಾ: ಬಹಳ ದಿನಗಳ ನಂತರ ಫಾರ್ಮ್ ಗೆ ಮರಳಿದ ಶಿಖರ್ ಧವನ್ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಗಳ ಜಯ ಗಳಿಸಿಕೊಡುವಲ್ಲಿ ಪ್ರಧಾನ ಪಾತ್ರವಹಿಸಿದರು.
 
ಅಜೇಯ 97 ರನ್ ಬಾರಿಸಿದ ಶಿಖರ್ ಶತಕ ತಪ್ಪಿಸಿಕೊಂಡರು. ಆದರೆ ತಮ್ಮ ತಂಡಕ್ಕೆ ಜಯ ಕೊಡಿಸಿ ಶತಕ ವಂಚಿತರಾದ ನಿರಾಸೆ ಮರೆತರು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಧವನ್ 97 ಮತ್ತು ರಿಷಬ್ ಪಂತ್ 46 ರನ್ ಗಳ ನೆರವಿನಿಂದ 18.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :