ಚೆನ್ನೈ ಸೂಪರ್ ಕಿಂಗ್ಸ್ ಗೆ ಮುಂದಿನ ನಾಯಕ ಯಾರು ಎಂಬುದಕ್ಕೆ ಸಿಕ್ಕಿದೆ ಸುಳಿವು!

ಚೆನ್ನೈ, ಶುಕ್ರವಾರ, 3 ಮೇ 2019 (06:21 IST)

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ತಂಡ ಎಂದೇ ಹೆಸರಾಗಿದೆ. ಧೋನಿ ಹೊರತಾಗಿ ಆ ಸ್ಥಾನಕ್ಕೆ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಅಭಿಮಾನಿಗಳಿಗೆ ಸಾಧ್ಯವಿಲ್ಲ.


 
 
ಆದರೆ ಯಾವುದೇ ಆಟಗಾರನಿಗೂ ಒಂದು ಅಂತ್ಯ ಎಂದು ಇದ್ದೇ ಇರುತ್ತದಲ್ಲವೇ? ಹಾಗೆಯೇ ಧೋನಿ ಕೂಡಾ. ಒಂದು ವೇಳೆ ಧೋನಿ ನಿವೃತ್ತರಾದರೆ ಆ ಸ್ಥಾನಕ್ಕೆ ನಾಯಕರಾಗಿ ಯಾರು ಬರಬಹುದು? ಈ ಪ್ರಶ್ನೆಗೆ ಇದೀಗ ಹಿರಿಯ ಆಟಗಾರ ಸುರೇಶ್ ರೈನಾ ಸುಳಿವು ನೀಡಿದ್ದಾರೆ.
 
ಧೋನಿ ನಂತರ ಚೆನ್ನೈ ಮುನ್ನಡೆಸಲು ತಾವು ಸಿದ್ಧರಿರುವುದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಒಂದೆರಡು ಪಂದ್ಯಗಳಲ್ಲಿ ಧೋನಿ ಅನುಪಸ್ಥಿತಿಯಲ್ಲಿ ರೈನಾ ತಂಡವನ್ನು ಮುನ್ನಡೆಸಿದ್ದರು.
 
ಡೆಲ್ಲಿ ಕ್ಯಾಪಿಟಲ್ಸ್‍ ವಿರುದ್ಧದ ಐಪಿಎಲ್ ಪಂದ್ಯದ ಬಳಿಕ ರೈನಾ ಧೋನಿಯನ್ನು ನಾಯಕನಾಗಿ ಮಿಸ್ ಮಾಡಿಕೊಳ್ಳುವುದಕ್ಕಿಂತ ಬ್ಯಾಟ್ಸ್ ಮನ್ ಆಗಿ ಅವರಿಲ್ಲದೇ ಇದ್ದಾಗ ನಮಗೆ ಒತ್ತಡವಾಗುತ್ತದೆ. ಬಹುಶಃ ಧೋನಿ ಇನ್ನೂ ಒಂದು ವರ್ಷ ಐಪಿಎಲ್ ಆಡಬಹುದೇನೋ. ಅಥವಾ ಅವರಿಗೆ ಇಷ್ಟ ಬಂದಷ್ಟು ಸಮಯ ಅವರು ಚೆನ್ನೈ ಪರ ಆಡುತ್ತಾರೆ. ಅದು ತಂಡಕ್ಕೂ ಅಭಿಮಾನಿಗಳಿಗೂ ಗೊತ್ತು ಎನ್ನುವ ಮೂಲಕ ಪರೋಕ್ಷವಾಗಿ ಧೋನಿ ನಂತರ ಚೆನ್ನೈ ನಾಯಕತ್ವ ವಹಿಸಲು ತಾವು ಸಿದ್ಧ ಎಂದು ಸೂಚಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ನ ವಿದೇಶೀ ಕೋಚ್ ಗಳಿಂದ ಟೀಂ ಇಂಡಿಯಾ ಮಾಹಿತಿ ಸೋರಿಕೆ?!

ಮುಂಬೈ: ಐಪಿಎಲ್ ನ ವಿವಿಧ ತಂಡಗಳಿಗೆ ಕೆಲಸ ಮಾಡುವ ವಿದೇಶೀ ಕೋಚ್ ಗಳಿಂದ ಟೀಂ ಇಂಡಿಯಾಕ್ಕೆ ಕುತ್ತು ...

news

ಮಿಂಚಿನ ಸ್ಟಂಪಿಂಗ್ ಹಿಂದಿನ ರಹಸ್ಯ ಬಯಲು ಮಾಡಿದ ಧೋನಿ

ಚೆನ್ನೈ: ವಿಕೆಟ್ ಕೀಪರ್ ಧೋನಿ ಮಿಂಚಿನ ಗತಿಯಲ್ಲಿ ಬ್ಯಾಟ್ಸ್ ಮನ್ ರನ್ನು ಸ್ಟಂಪ್ ಔಟ್ ಮಾಡುವುದರಲ್ಲಿ ...

news

ಬುಲೆಟ್ ಟ್ರೈನ್ ಗೆ ಧೋನಿಯ ಗ್ಲೌಸ್ ಅಧಿಕೃತ ಲೋಗೋ ಆಗಬೇಕಂತೆ!

ಮುಂಬೈ: ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎದುರಾಳಿಯನ್ನು ಸ್ಟಂಪ್ ಔಟ್ ಮಾಡುವ ಮಿಂಚಿನ ಕೀಪರ್ ಧೋನಿ. ಅವರ ...

news

ನಾನು ಕೆಮ್ಮಿದ್ರೆ ಎದುರಾಳಿಗಳಿಗೆ ಭಯವಾಗಬಹುದು ಎಂದು ತಮಾಷೆ ಮಾಡಿದ ಧೋನಿ

ಚೆನ್ನೈ: ಕಳೆದ ಕೆಲವು ದಿನಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಜ್ವರದಿಂದ ಬಳಲುತ್ತಿದ್ದ ...