ನಾವೇನು ಐಪಿಎಲ್ ಆಡ್ತಿದ್ದೀವಾ, ಗಲ್ಲಿ ಕ್ರಿಕೆಟ್ ಆಡ್ತಿದ್ದೀವಾ? ಸಿಟ್ಟಿಗೆದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ

ಬೆಂಗಳೂರು, ಶುಕ್ರವಾರ, 29 ಮಾರ್ಚ್ 2019 (09:19 IST)

ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಳಪೆ ಅಂಪಾಯರಿಂಗ್ ನಿಂದಾ ಸೋತ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಿಟ್ಟು ಹೊರಹಾಕಿದ್ದಾರೆ.


 
ಅಂತಿಮ ಎಸೆತದಲ್ಲಿ ಗೆಲುವಿಗೆ 7 ರನ್ ಬೇಕಾಗಿದ್ದಾಗ ಮುಂಬೈ ಇಂಡಿಯನ್ಸ್ ಬೌಲರ್  ನೋ ಬಾಲ್ ಎಸೆದರೂ ಗಮನಿಸದ ಅಂಪಾಯರ್ ನಿಂದಾಗಿ ಆರ್ ಸಿಬಿ ಅನ್ಯಾಯವಾಗಿ ಸೋಲನುಭವಿಸಬೇಕಾಯಿತು.
 
ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೊಹ್ಲಿ ‘ನಾವೇನು ಗಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದು ಐಪಿಎಲ್. ಅಂಪಾಯರ್ ಗಳು ತಮ್ಮ ಕಣ್ಣು ಬಿಟ್ಟುಕೊಂಡಿರಬೇಕು. ಇದು ನಿಜಕ್ಕೂ ಒಪ್ಪುವಂತಹದ್ದಲ್ಲ. ಒಂದು ವೇಳೆ ಸ್ಕೋರ್ ಲೆವೆಲ್ ಆಗಿದ್ದರೆ ಆ ಬಾಲ್ ನ ಪ್ರಮಾದದ ಗಂಭೀರತೆ ಎಷ್ಟು ಎಂದು ಗೊತ್ತಾಗುತ್ತಿತ್ತು. ಅಂಪಾಯರ್ ಗಳು ಎಚ್ಚರಿಕೆಯಿಂದಿರಬೇಕು’ ಎಂದು ಕಿಡಿಕಾರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನನ್ನ ಕ್ಯಾರೆಕ್ಟರ್ ಬಗ್ಗೆಯೇ ನನಗೆ ಡೌಟು ಶುರುವಾಗಿತ್ತು ಎಂದು ಕೆಎಲ್ ರಾಹುಲ್

ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಕ್ಕೆ ನಿಷೇಧ ...

news

ಯಾರು ಬೆಂಬಲಿಸಿದ್ದರೇನಂತೆ ಮಂಕಡ್ ಔಟ್ ಮಾಡಿದ್ದಕ್ಕೆ ಆರ್. ಅಶ್ವಿನ್ ಗೆ ಸಿಕ್ಕಿತು ರಾಹುಲ್ ದ್ರಾವಿಡ್ ಸಪೋರ್ಟ್!

ಮುಂಬೈ: ಐಪಿಎಲ್ ನ ಮೊದಲ ಪಂದ್ಯದಲ್ಲೇ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ...

news

ಐಪಿಎಲ್: ಅಂಪಾಯರ್ ‘ಕೃಪೆ’ಯಿಂದ ಕೂದಲೆಳೆಯಲ್ಲಿ ಸೋತ ಆರ್ ಸಿಬಿ

ಬೆಂಗಳೂರು: ಯಾಕೋ ಈ ಬಾರಿಯೂ ಐಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದುರಾದೃಷ್ಟ ಕಳಚಿ ...

news

ಮತ್ತೆ ಎಡವಟ್ಟು ಮಾಡಿಕೊಂಡ ರವಿಚಂದ್ರನ್ ಅಶ್ವಿನ್

ಕೋಲ್ಕೊತ್ತಾ: ಯಾಕೋ ಈ ಬಾರಿಯ ಐಪಿಎಲ್ ನಲ್ಲಿ ಉದ್ದೇಶಪೂರ್ವಕವಾಗಿಯೋ, ಅಲ್ಲದೆಯೋ ಕಿಂಗ್ಸ್ ಇಲೆವೆನ್ ಪಂಜಾಬ್ ...