Widgets Magazine

ಐಪಿಎಲ್: ಸೋಲಿಗೆ ಕಾರಣ ವಿವರಿಸಿದ ವಿರಾಟ್ ಕೊಹ್ಲಿ

ಜೈಪುರ| Krishnaveni K| Last Modified ಬುಧವಾರ, 3 ಏಪ್ರಿಲ್ 2019 (10:05 IST)
ಜೈಪುರ: ರಾಜಸ್ಥಾನ ವಿರುದ್ಧವೂ ಸೋಲುವುದರೊಂದಿಗೆ ಈ ಬಾರಿಯ ಐಪಿಎಲ್ ಕೂಟದಲ್ಲಿ ಸತತ ನಾಲ್ಕನೇ ಸೋಲು ಕಾಣುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಗೆಪಾಟಲಿಗೀಡಾಗಿದೆ.
 
ಈ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿಗೆ ಸೋಲಿನ ಕಾರಣ ವಿವರಿಸಿದ್ದಾರೆ. 10-15 ರನ್ ಗಳ ಕೊರತೆಯಾಗಿದ್ದಕ್ಕೇ ಸೋಲು ಕಾಣುವಂತಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
 
‘ನಾವು ಸ್ಪರ್ಧಾತ್ಮಕವಾಗಿಯೇ ಆಡಿದ್ದೆವು. ಆದರೂ 10-15 ರನ್ ಗಳ ಕೊರತೆಯಾಯಿತು. 160 ರನ್ ಸ್ಪರ್ಧಾತ್ಮಕ ರನ್ ಎಂದುಕೊಂಡಿದ್ದೆ. ಆದರೂ ಕೆಲವೇ ರನ್ ಗಳ ಕೊರತೆಯಾಯಿತು. ಅಲ್ಲದೆ ಹಲವು ಕ್ಯಾಚ್ ಗಳನ್ನು ಕೈ ಚೆಲ್ಲಿದೆವು. ಈ ರೀತಿಯ ಪಂದ್ಯದಲ್ಲಿ ಇಂತಹ ತಪ್ಪುಗಳೇ ದುಬಾರಿಯಾಗುತ್ತವೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
 
ಇನ್ನು, ಮುಂದಿನ ಪಂದ್ಯಗಳಿಗೆ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಸರಿಯಾದ ಕಾಂಬಿನೇಷನ್ ನೊಂದಿಗೆ ಕಣಕ್ಕಿಳಿಯುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :