ಐಪಿಎಲ್ ಆಯೋಜಿಸಿ ಭಾರೀ ಹಣ ಜೇಬಿಗಿಳಿಸಿಕೊಂಡ ಬಿಸಿಸಿಐ

ಮುಂಬೈ, ಸೋಮವಾರ, 23 ನವೆಂಬರ್ 2020 (11:14 IST)

ಮುಂಬೈ: ಐಪಿಎಲ್ ಎಂಬುದು ಶ್ರೀಮಂತ ಕ್ರೀಡಾಕೂಟ ಎನ್ನುವುದು ಮತ್ತೆ ಸಾಬೀತಾಗಿದೆ. ಕೊರೋನಾ ಬಂದು ಪ್ರೇಕ್ಷಕರೇ ಮೈದಾನಕ್ಕೆ ಬರದ ಸ್ಥಿತಿಯಲ್ಲಿ ಆಯೋಜಿಸಿ ಸೈ ಎನಿಸಿಕೊಂಡ ಭಾರೀ ಪ್ರಮಾಣದಲ್ಲಿ ದುಡ್ಡೂ ಬಾಚಿಕೊಂಡಿದೆ ಎಂಬ ಸುದ್ದಿ ಬಂದಿದೆ.
 

ಒಂದು ವೇಳೆ ಈ ಬಾರಿ ಐಪಿಎಲ್ ಆಯೋಜಿಸದೇ ಇದ್ದರೆ ಬಿಸಿಸಿಐ 4000 ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅಧ್ಯಕ್ಷ ಗಂಗೂಲಿ ಹೇಳಿದ್ದರು. ಆದರೆ ಯುಎಇನಲ್ಲಿ ಐಪಿಎಲ್ ಆಯೋಜಿಸಿದ ಬಿಸಿಸಿಐ ಈಗ 4000 ಕೋಟಿ ರೂ. ಆದಾಯ ಗಳಿಸಿದೆ. ಟಿವಿ ವ್ಯೂವರ್ ಶಿಪ್ ಕೂಡಾ ಈ ಬಾರಿ ದಾಖಲೆ ಮಾಡಿತ್ತು. ಈ ವಿಚಾರವನ್ನು ಸ್ವತಃ ಬಿಸಿಸಿಐ ಹೇಳಿಕೊಂಡಿದೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :