ದುಬೈ: ಅನಾರೋಗ್ಯಕ್ಕೊಳಗಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕ್ರಿಸ್ ಗೇಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ನಿನ್ನೆಯ ಪಂದ್ಯದಲ್ಲೂ ಅವರು ಆಡಿರಲಿಲ್ಲ.ಗೇಲ್ ಫುಡ್ ಪಾಯ್ಸನ್ ಗೊಳಗಾಗಿದ್ದು, ಅಸ್ವಸ್ಥರಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಸೋತು ಸುಣ್ಣವಾಗಿರುವ ತಮ್ಮ ತಂಡಕ್ಕೆ ಆಸ್ಪತ್ರೆಯಿಂದಲೇ ಸ್ಪೂರ್ತಿದಾಯಕ ಸಂದೇಶ ನೀಡಿರುವ ಗೇಲ್ ನಾನು ಹೋರಾಟ ಮಾಡದೇ ಹೋಗುವವನಲ್ಲ. ನನ್ನ ಹೋರಾಟದ ಮನೋಭಾವವನ್ನು ನೀವು ಫಾಲೋ ಮಾಡಬಹುದು. ಆದರೆ ನನ್ನ ಎಲ್ಲವನ್ನೂ ನೀವು ಫಾಲೋ ಮಾಡಬೇಕೆಂದಲ್ಲ.