ದುಬೈ: ಐಪಿಎಲ್ 13 ರಲ್ಲಿ 7 ಪಂದ್ಯ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರಲು ಇನ್ನೊಂದು ಕಠಿಣ ಅವಕಾಶವಿದೆ. ಚೆನ್ನೈ ಟೂರ್ನಿಯಲ್ಲಿ ಇನ್ನು ನಾಲ್ಕು ಲೀಗ್ ಪಂದ್ಯಗಳನ್ನಾಡಬೇಕಿದೆ. ಈ ನಾಲ್ಕೂ ಪಂದ್ಯಗಳನ್ನು ಗೆದ್ದರೆ ಚೆನ್ನೈಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಅವಕಾಶವಿದೆ. ಆದರೆ ಇದಕ್ಕೆ ಈಗಾಗಲೇ ಅಗ್ರ ಕ್ರಮಾಂಕದಲ್ಲಿರುವ ತಂಡಗಳ ಪೈಕಿ ಯಾವುದಾದರೂ ತಂಡ ಉಳಿದೆಲ್ಲಾ ಪಂದ್ಯಗಳನ್ನು ಸೋಲಬೇಕು. ಆದರೆ ಸದ್ಯದ