ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ಪರ ವೇಗಿ ಮೋನು ಕುಮಾರ್ ಪದಾರ್ಪಣೆ ಮಾಡಿದ್ದರು. ಆದರೆ ಇದುವರೆಗೆ ಹೆಸರು ಕೇಳಿಯೇ ಗೊತ್ತಿಲ್ಲದ ವೇಗಿಯನ್ನು ಕಣಕ್ಕಿಳಿಸಿದ ಧೋನಿ ಈ ವಿಚಾರವಾಗಿ ಟ್ರೋಲ್ ಗೊಳಗಾಗಿದ್ದಾರೆ.ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಳೆದ ಎರಡು ಸೀಸನ್ ಗಳಲ್ಲಿ ಅವಕಾಶವೇ ಇಲ್ಲದೇ ಕುಳಿತಿದ್ದ ಮೋನು ಕುಮಾರ್ ನನ್ನು ಕಣಕ್ಕಿಳಿಸಿದ್ದು ನೋಡಿ ನೆಟ್ಟಿಗರು ನೆಟ್ ಬೌಲರ್ ಗಳನ್ನೆಲ್ಲಾ ಕಣಕ್ಕಿಳಿಸುತ್ತಿದ್ದಾರಲ್ಲಾ ಧೋನಿ ಎಂದು ತಮಾಷೆ ಮಾಡಿದ್ದಾರೆ.