ದುಬೈ: ಐಪಿಎಲ್ 13 ಈಗಷ್ಟೇ ಮುಗಿದಿದೆ. ಹೀಗಾಗಿ ಐಪಿಎಲ್ 14 ನ್ನು ಮುಂದೂಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ವರ್ಷದ ಐಪಿಎಲ್ ನಡೆದಿರುವುದೇ ಲೇಟ್ ಆಗಿ. ಹೀಗಾಗಿ ಮುಂದಿನ ಏಪ್ರಿಲ್ ವೇಳೆಗೆ ಐಪಿಎಲ್ ನಡೆದರೆ ಹಾಲಿ ಚಾಂಪಿಯನ್ ಮುಂಬೈಗೆ ತುಂಬಾ ದಿನ ಚಾಂಪಿಯನ್ ಆಗಿ ಉಳಿಯುವ ಯೋಗವಿಲ್ಲ. ಈ ಐಪಿಎಲ್ ನಿಂದ ಮುಂದಿನ ಐಪಿಎಲ್ ಗೆ ಕೇವಲ ಆರು ತಿಂಗಳ ಅಂತರವಿದೆ.