ಚಿಯರ್ ಲೀಡರ್ ಎಂದಿದ್ದ ಸೆಹ್ವಾಗ್ ಗೆ ಪಂಜಾಬ್ ಬ್ಯಾಟ್ಸ್ ಮನ್ ಮ್ಯಾಕ್ಸ್ ವೆಲ್ ಕೊಟ್ಟ ಉತ್ತರವೇನು ಗೊತ್ತಾ?!

ದುಬೈ, ಶನಿವಾರ, 21 ನವೆಂಬರ್ 2020 (09:53 IST)

ದುಬೈ: ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಳಪೆ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಭಾರೀ ಟೀಕೆಗೊಳಗಾಗಿದ್ದರು. ಅದರಲ್ಲೂ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂತೂ ಮ್ಯಾಕ್ಸ್ ವೆಲ್ ರನ್ನು 10 ಕೋಟಿಯ ಚಿಯರ್ ಲೀಡರ್ ಎಂದು ವ್ಯಂಗ್ಯ ಮಾಡಿದ್ದರು.
 

ಇದರ ಬಗ್ಗೆ ಮ್ಯಾಕ್ಸ್ ವೆಲ್ ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ಪರವಾಗಿಲ್ಲ. ವೀರೂ ನನ್ನ ಮೇಲಿರುವ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅವರು ಅಂತಹ ಮಾಧ‍್ಯಮದಲ್ಲಿದ್ದಾರೆ. ಹೀಗಾಗಿ ಇಂತಹ ಹೇಳಿಕೆಯನ್ನು ನೀಡಲೇಬೇಕಾಗುತ್ತದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ’ ಎಂದು ಮ್ಯಾಕ್ಸ್ ವೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :