ದುಬೈ: ಐಪಿಎಲ್ 13 ರಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡನೇ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 44 ರನ್ ಗಳ ಸೋಲು ಕಂಡಿದೆ.ಯಂಗ್ ಶ್ರೇಯಸ್ ಐಯರ್ ನೇತೃತ್ವದ ಡೆಲ್ಲಿ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ ಧೋನಿ ನೇತೃತ್ವದ ಸಿಎಸ್ ಕೆ ಸೋಲುಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.