ದುಬೈ: ಐಪಿಎಲ್ 13 ರಲ್ಲಿ ಕಳಪೆ ಆಟದಿಂದ ಟೀಕೆಗೊಳಗಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಂದು ಪ್ರಬಲ ಡೆಲ್ಲಿ ಎದುರಾಳಿಯಾಗಲಿದೆ.ಇಂದಿನ ಎರಡನೇ ಪಂದ್ಯದಲ್ಲಿ ಚೆನ್ನೈ ಡೆಲ್ಲಿ ತಂಡವನ್ನು ಎದುರಿಸಲಿದೆ. ಅಗ್ರಸ್ಥಾನಿಯಾಗಿರುವ ಡೆಲ್ಲಿಗೆ ಚೆನ್ನೈ ಮಣಿಸುವುದು ಕಷ್ಟವಾಗದು. ಸದ್ಯಕ್ಕೆ ಚೆನ್ನೈಗೆ ಬ್ಯಾಟಿಂಗ್ ಸಮಸ್ಯೆಯಾಗಿದೆ. ಕಳೆದ ಪಂದ್ಯದಲ್ಲಿ ಕೊಂಚ ಚೇತೋಹಾರಿ ಪ್ರದರ್ಶನ ನೀಡಿದರೂ ಚೆನ್ನೈ ಬೃಹತ್ ಮೊತ್ತ ಪೇರಿಸುವಲ್ಲಿ ಸೋಲುತ್ತಿದೆ. ಇದು ಪ್ರಬಲ ಡೆಲ್ಲಿ ವಿರುದ್ಧ ಕೊರತೆಯಾಗಿ ಕಾಡಬಹುದು. ಪಂದ್ಯ ಸಂಜೆ 7.30