ದುಬೈ: ಇದುವರೆಗೆ ಕಳಪೆ ಪ್ರದರ್ಶನ ನೀಡುತ್ತಲೇ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೀಗ ಕೊನೆಯ ಹಂತದಲ್ಲಿ ಗೆಲುವಿನೊಂದಿಗೆ ಬೇರೆ ತಂಡಗಳ ಪ್ಲೇ ಆಫ್ ಕನಸಿಗೆ ವಿಘ್ನ ಸಂತೋಷಿಯಾಗುತ್ತಿದೆ.ನಿನ್ನೆಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿ ತಾನು ಕೂಟದಿಂದ ಹೊರಬಿದ್ದಿರುವುದಲ್ಲದೆ, ಪಂಜಾಬ್ ನ್ನೂ ಹೊರನೂಕಿದೆ. ನಿನ್ನೆಯ ಸೋಲಿನೊಂದಿಗೆ ಪಂಜಾಬ್ ಪ್ಲೇ ಆಫ್ ಕನಸು ಭಗ್ನವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದಿತ 20 ಓವರ್